ಇಂದೂ ಕೂಡ ಪೆಟ್ರೋಲ್-ಡೀಸಲ್ ಬೆಲೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.21-ಮತ್ತೆ ತೈಲ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸಲ್ ಬೆಲೆ 35 ಪೈಸೆಯಷ್ಟು ಹೆಚ್ಚಳವಾಗಿದೆ. ಸತತ ಎರಡು ದಿನಗಳಿಂದ ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ ದೇಶದ್ಯಾಂತ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಗಗನಮುಖಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 106.54 ರೂ.ಗಳಾಗಿದ್ದಾರೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‍ಗೆ 112.44 ರೂ.ಗಳಾಗಿರುವುದು ವಿಶೇಷ.

ಮುಂಬೈನಲ್ಲಿ ಡೀಸಲ್ ಬೆಲೆ 103.26 ರೂ.ಗಳಾಗಿದ್ದರೆ, ದೆಹಲಿಯಲ್ಲಿ ಒಂದು ಲೀಟರ್ ಡೀಸಲ್‍ಗೆ 95.27 ರೂ.ತೆರಬೇಕಾಗಿದೆ. ದೇಶದೆಲ್ಲೆಡೆ ಪೆಟ್ರೋಲ್ ಬೆಲೆ ಈಗಾಗಲೆ ನೂರು ರೂ.ಗಳ ಗಡಿ ದಾಟಿದ್ದು, ಬಹುತೇಕ ರಾಜ್ಯಗಳಲ್ಲಿ ಡೀಸಲ್ ಬೆಲೆ ನೂರು ರೂ.ಅಸುಪಾಸಿಗೆ ಬಂದಿದೆ.

Facebook Comments