ಹೊತ್ತಿ ಉರಿದ ಕಚ್ಚಾ ತೈಲ ತುಂಬಿದ್ದ ಹಡಗು

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರ,ಸೆ.4-ಕುವೈತ್‍ನಿಂದ ಭಾರತಕ್ಕೆ ತೈಲ ಹೊತ್ತು ತರುತ್ತಿದ್ದ ಹಡಗು ಶ್ರೀಲಂಕಾದ ಪೂರ್ವ ಕರಾವಳಿ ಬಳಿ ಬೆಂಕಿಗಾಹುತಿಯಾಗಿದೆ. ಪನಾಮ ದೇಶದ ಒಡೆತನದ ನೋಂದಣಿಯಲ್ಲಿರುವ ತೈಲ ಸಾಗಿಸುವ ಬೃಹತ್ ಹಡಗು ಸುಮಾರು 2.70 ಲಕ್ಷ ಮೆಟ್ರಿಕ್ ಟನ್ನಷ್ಟು ಕಚ್ಚಾ ತೈಲವನ್ನು ಭಾರತಕ್ಕೆ ತರುತ್ತಿತ್ತು.

ಇಂಡಿಯನ್ ಆಯಿಲ್ ಕಾಪೆರ್ರೇಷನ್(ಐಒಸಿ) ಬೇಡಿಕೆ ಸಲ್ಲಿಸಿತ್ತು. ಬೆಂಕಿಯಿಂದಾಗಿ ಶ್ರೀಲಂಕಾದ ಕರಾವಳಿ, ಹತ್ತಿರದ ತಮಿಳುನಾಡು ಹಾಗೂ ಕೇರಳ ಕರಾವಳಿಗೂ ಆತಂಕ ಶುರುವಾಗಿದೆ. ಕಚ್ಚಾತೈಲ ಸಮುದ್ರಕ್ಕೆ ಸೋರಿಕೆಯಾದರೆ ಸುಮಾರು 700 ಕಿ.ಮೀ. ಚದುರದಷ್ಟು ಕರಾವಳಿ ಪ್ರದೇಶದಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಜಲಚರಗಳಿಗೂ ಇದರಿಂದ ಕಂಟಕ ಎಂದು ಹೇಳಲಾಗುತ್ತಿದೆ.

ಈಗಾಗಲೇ ಭಾರತೀಯ ಸಾಗರ ಮಾಹಿತಿ ಸೇವಾ ಪ್ರಾಧಿಕಾರ ಮತ್ತು ಕಡಲು ಕಾವಲು ಪಡೆ ಮತ್ತು ವಿದೇಶಾಂಗ ಸಚಿವಾಲಯ ನಿಕಟ ಸಂಪರ್ಕ ಹೊಂದಿದ್ದು, ಎನ್‍ಡಿಆರ್‍ಎಫ್‍ಗೂ ಕೂಡ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ನೌಕೆಯಲ್ಲಿದ್ದ ಕೆಲ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ.ಅಪಾರ ಪ್ರಮಾಣದ ಕಚ್ಚಾ ತೈಲ ಸಮುದ್ರ ಪಾಲಾಗುವ ಅಪಾಯ ಎದುರಾಗಿದೆ.

Facebook Comments