ಬೆಂಗಳೂರಲ್ಲಿ ಕುಸಿದ ಮತ್ತೊಂದು ಹಳೆ ಮನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.17- ಸತತ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಒಂದು ಭಾಗ ಕುಸಿದಿರುವ ಘಟನೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್‍ನ ರಾಜೀವ್‍ಗಾಂ ಕಾಲೋನಿಯಲ್ಲಿ ನಡೆದಿದೆ. ಸುಮಾರು 60 ವರ್ಷದ ಹಳೆಯ ಮನೆಯ ಭಾಗ ಕುಸಿದಿದ್ದು , ಅಲ್ಲಿ ವಾಸಿಸುತ್ತಿದ್ದವರು ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುಮಾರು 6 ಮಂದಿ ಈ ಮನೆಯಲ್ಲಿ ವಾಸವಾಗಿದ್ದರು. ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಛಾವಣಿ ಹಾಗೂ ಗೋಡೆಗಳು ಶಿಥಿಲಗೊಂಡು ಬಿರುಕು ಬಿಟ್ಟಿತ್ತು. ಅಪಾಯದ ಮುನ್ನೆಚ್ಚರಿಕೆಯಿಂದಾಗಿ ನಿನ್ನೆ ರಾತ್ರಿಯೇ ಎಲ್ಲರೂ ಮನೆ ಖಾಲಿ ಮಾಡಿದ್ದರು.ಇದರಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ.

ಅವಿಭಕ್ತ ಕುಟುಂಬದ ಮಾಲೀಕತ್ವದಲ್ಲಿರುವ ಈ ಕಟ್ಟಡದ ಪಕ್ಕದಲ್ಲಿಯೇ ಅವರ ಸಂಬಂಕರು ಕೂಡ ವಾಸವಾಗಿದ್ದಾರೆ. ಕಳೆದ ರಾತ್ರಿ ಮನೆ ಕುಸಿಯುತ್ತಿರುವುದನ್ನು ಗಮನಿಸಿ ಮನೆಯವರು ಪೊಲೀಸರಿಗೆ ಹಾಗೂ ಬಿಬಿಎಂಪಿ ಅಕಾರಿಗಳಿಗೆ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸ್ಥಳಕ್ಕೆ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಇನ್ನೊಂದು ಭಾಗದಲ್ಲಿ ವಾಸಿಸುತ್ತಿದ್ದವರನ್ನು ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

Facebook Comments