ಕೋಟಿ ಮೌಲ್ಯದ ಹಳೆ ನೋಟುಗಳು ವಶ, ನಾಲ್ವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21-ನಿಷೇಧಿತ ನೋಟುಗಳ ಬದಲಾವಣೆ ಮಾಡುತ್ತಿದ್ದ ನಾಲ್ವರನ್ನು ಉತ್ತರ ವಿಭಾಗದ ಹೆಬ್ಬಾಳ ಠಾಣೆ ಪೆÇಲೀಸರು ಬಂಧಿಸಿ ಒಂದು ಕೋಟಿ ರೂ. ಮೌಲ್ಯದ ಅಮಾನ್ಯಗೊಂಡಿರುವ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ಪುರಂನ ರಾಜೇಂದ್ರ ಪ್ರಸಾದ್ (49), ವಿಲ್ಸನ್‍ಗಾರ್ಡ್‍ನ್ ನಿವಾಸಿ ಸುರೇಶ್‍ಕುಮಾರ್ (40), ಆಡುಗೋಡಿಯ ಷಾನವಾಜ್ (45) ಮತ್ತು ಬ್ಯಾಟರಾಯನಪುರದ ಸತೀಶ್ (40) ಬಂಧಿತ ಆರೋಪಿಗಳಾಗಿದ್ದು, ಇವರಿಂದ ನಿಷೇಧಿತ 500 ಮತ್ತು ಸಾವಿರ ರೂ. ಮುಖ ಬೆಲೆಯ 99 ಲಕ್ಷ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಹೆಬ್ಬಾಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಯಲಹಂಕದ ಬಾಗಲೂರು ಕ್ರಾಸ್‍ನ ನಾಗರಾಜು ಎಂಬುವರು ಎರಡು ತಿಂಗಳ ಹಿಂದೆ ಮಲ್ಲೇಶ್ವರಂನ 18ನೇ ಕ್ರಾಸ್ ಬಳಿ ಇರುವ ಟಾಟಾ ಇನ್ಸ್‍ಟ್ಯೂಟ್‍ನಲ್ಲಿ ಟ್ರಾವೆಲ್ ಕೆಲಸಕ್ಕಾಗಿ ಹೋಗಿದ್ದಾಗ ಅಲ್ಲಿನ ಇಂದಿರಾಕ್ಯಾಂಟಿನ್‍ನಲ್ಲಿ ಊಟ ಮಾಡುತ್ತಿದ್ದಾಗ ರಾಜೇಂದ್ರ ಎಂಬಾತ ಪರಿಚಯಿಸಿಕೊಂಡಿದ್ದಾನೆ. ತದನಂತರದಲ್ಲಿ ನಂಬಿಕೆ ಬರುವಂತೆ ನಾಗರಾಜು ಅವರೊಂದಿಗೆ ವರ್ತಿಸಿ ತನಗೆ ಪರಿಚಯವಿರುವ ವ್ಯಕ್ತಿ ಬಳಿ ನಿಷೇಧಿತವಾಗಿರುವ 500, 1000ರೂ. ಮುಖ ಬೆಲೆಯ ಹಳೆಯ ನೋಟುಗಳನ್ನು ತಂದು ಹೊಸ ನೋಟುಗಳಿಗೆ ಬದಲಾವಣೆ ಮಾಡುತ್ತಿದ್ದನು.

ಒಂದು ಕೋಟಿ ಮೌಲ್ಯದ ನಿಷೇಧಿತ ನೋಟುಗಳಿಗೆ 10 ಲಕ್ಷ ರೂ. ಹೊಸ ನೋಟು ಕೊಟ್ಟು ಖರೀದಿಸಿದರೆ, ತದನಂತರದಲ್ಲಿ ಈ ನಿಷೇಧಿತ ನೋಟುಗಳನ್ನು ತನಗೆ ಪರಿಚಯವಿರುವ ಮತ್ತೊಬ್ಬ ವ್ಯಕ್ತಿಯ ಕಡೆಯಿಂದ 14 ಲಕ್ಷ ರೂ. ಖರೀದಿ ಮಾಡಿಸುತ್ತೇನೆ. ರಿಸರ್ವ್‍ಬ್ಯಾಂಕ್‍ನಲ್ಲಿ ಹೊಸ ನೋಟುಗಳನ್ನು ಬದಲಾಯಿಸಿಕೊಡುತ್ತಾರೆ. ಈ ವ್ಯವಹಾರದಿಂದ 4 ಲಕ್ಷ ಲಾಭ ಬರುತ್ತದೆ. ಅದರಲ್ಲಿ ಇಬ್ಬರೂ ತಲಾ ಎರಡು ಲಕ್ಷ ಇಟ್ಟುಕೊಂಡು ಉಳಿದ 12 ಲಕ್ಷ ರೂ.ವನ್ನು ತಮಗೆ ಕೊಡುತ್ತೇನೆ ಎಂದು ನಂಬಿಸಿದ್ದಾನೆ.

ಅಲ್ಲದೆ ಇದೇ ರೀತಿ ಸಾಕಷ್ಟು ಹಳೆಯ ನೋಟುಗಳಿದ್ದು, ಅವುಗಳನ್ನು ಸಪ್ಲೈ ಮಾಡಲು ಜನರಿದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳಿಂದ ಮಧ್ಯವರ್ತಿಗಳ ಮೂಲಕ ಹಣ ಬರುತ್ತದೆ ಎಂದು ನಾಗರಾಜು ಅವರಿಗೆ ಆಸೆ ಮೂಡಿಸಿ ಅವರ ಸಹೋದರ ಸಂಬಂಧಿ ರಾಜಣ್ಣ ಎಂಬುವರನ್ನು ಕಾಪೆರ್ರೇಷನ್ ಬಳಿಯ ಯುನಿಟಿ ಬಿಲ್ಡಿಂಗ್ ಬಳಿ ಆರೋಪಿ ರಾಜೇಂದ್ರ ಕರೆಸಿಕೊಂಡಿದ್ದನು. ಅಲ್ಲಿ ತನ್ನ ಸಹಚರರಾದ ಸುರೇಶ, ಷಾನವಾಜ್, ಸತೀಶ್‍ನನ್ನು ಪರಿಚಯಿಸಿ, ಇವರೇ ನಿಷೇಧಿತ ನೋಟುಗಳನ್ನು ತಂದು ಕೊಡುವರು ಎಂದು ನಂಬಿಸಿದ್ದಾನೆ.

ಹತ್ತು ಲಕ್ಷ ರೂ.ವನ್ನು ನಾಗರಾಜು ಅವರಿಂದ ಪಡೆದು ಸುಮಾರು ಒಂದು ಕೋಟಿ ಬೆಲೆಯ 500, 1000ರೂ. ಮುಖಬೆಲೆಯ ನೋಟುಗಳನ್ನು ನೀಡಿ ಈ ಹಣವನ್ನು ಗಿರಾಕಿಗಳಿಗೆ ಕೊಟ್ಟು ಹೊಸ ನೋಟುಗಳಿಗೆ ಬದಲಾವಣೆ ಮಾಡಿಸುತ್ತೇನೆಂದು ನಂಬಿಸಿ ಅವರನ್ನು ಕರೆದುಕೊಂಡು ಹಲವು ಕಡೆ ಸುತ್ತಾಡಿಸಿ, ನಂಬಿಕೆ ದ್ರೋಹ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಹೆಬ್ಬಾಳ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ನಾಲ್ಕು ಮಂದಿಯನ್ನು ಬಂಧಿಸಿ ನಿಷೇಧಿತ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೆ.ಸಿ.ನಗರ ವಿಭಾಗದ ಎಸಿಪಿ ಶಾಂತ್‍ಕುಮಾರ್, ಹೆಬ್ಬಾಳ ಠಾಣೆ ಇನ್ಸ್‍ಪೆಕ್ಟರ್ ಅಶ್ವತ್‍ಗೌಡ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments