ಹಳೆಯ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡಲು ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.1- ಹಳೆಯ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡುವ ಸ್ವಯಂ ಘೋಷಿತ ಯೋಜನೆಯನ್ನು ಕೇಂದ್ರ ಸಚಿವೆ ನಿರ್ಮಲಾಸೀತಾರಾಮನ್ ತಮ್ಮ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಸ್ವಂತ ಬಳಕೆಯ 20 ವರ್ಷ ಹಳೆಯ ವಾಹನಗಳು ಹಾಗೂ ವಾಣಿಜ್ಯ ಬಳಕೆಯ 15 ವರ್ಷಗಳ ಹಳೆಯ ವಾಹನಗಳನ್ನು ಮಾಲೀಕರೇ ಸ್ಕ್ರ್ಯಾಪಿಂಗ್(ನಾಶ) ಮಾಡಲು ನಿರ್ಮಲಾಸೀತಾರಾಮನ್ ಸಲಹೆ ನೀಡಿದ್ದು, ಇದಕ್ಕಾಗಿ ವಿಶೇಷ ಯೋಜನೆಗಳನ್ನು ಇಲಾಖೆವತಿಯಿಂದ ಪ್ರತ್ಯೇಕವಾಗಿ ಘೋಷಿಸುವುದಾಗಿ ತಿಳಿಸಿದ್ದಾರೆ.

ಹಳೆಯ ವಾಹನಗಳನ್ನು ನಾಶಪಡಿಸಿರುವುದರಿಂದ ಇಂಧನ ಕ್ಷಮತೆ, ವಾಯುಮಾಲಿನ್ಯ ನಿಯಂತ್ರಣ ಸೇರಿದಂತೆ ಹಲವಾರು ಲಾಭಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ತೈಲ ಆಮದನ್ನು ಕಡಿಮೆ ಮಾಡಬಹುದು. ಈ ಮೂಲಕ ಆರ್ಥಿಕತೆ ಸುಧಾರಣೆಯಾಗಲಿದೆ. ಜತೆಗೆ ವಾಹನಗಳ ಸಾಮಥ್ರ್ಯ ದೃಢೀಕರಣಕ್ಕೆ ನೂತನ ವ್ಯವಸ್ಥೆಯನ್ನು ಅಳವಡಿಸುವುದಾಗಿ ಅವರು ಹೇಳಿದ್ದಾರೆ.

Facebook Comments

Sri Raghav

Admin