ಚಿನ್ನ ದೋಚಿದ ಚಾಲಾಕಿ ಮುದುಕಿಯರು, ಸಿಸಿಟಿವಿಯಲ್ಲಿ ಕೈಚಳಕ ಸೆರೆ..! (Video)

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಫೆ.24- ಮೂವರು ಚಾಲಾಕಿ ಮುದುಕಿಯರು ಮಾಲೀಕನ ಗಮನವನ್ನು ಬೇರೆಯಡೆ ಸೆಳೆದು ಅಂಗಡಿಯಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಬಾಗೂರು ರಸ್ತೆಯಲ್ಲಿರುವ ನಂದಿ ಜ್ಯೂವೆಲರ್ಸ್ ಎಂಬ ಚಿನ್ನದ ಅಂಗಡಿಗೆ ಆಗಮಿಸಿದ ವಯಸ್ಸಾದ ಮಹಿಳೆಯರು ಚಿನ್ನದ ಖರೀದಿಸುವ ನೆಪದಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದಿದ್ದಾರೆ. ಈ ವೇಳೆ ಮತ್ತೊಬ್ಬ ಮಹಿಳೆ ಕಪಾಟಿನಲ್ಲಿದ್ದ 15ಗ್ರಾಂ ಚಿನ್ನ ಹಾಗು ನಗದನ್ನು ಕಳ್ಳತನ ಮಾಡಿದ್ದಾಳೆ.

ಪ್ರತಿ ಶನಿವಾರ ಪಟ್ಟಣದಲ್ಲಿ ಸಂತೆ ನಡೆಯುತ್ತದೆ. ಹಾಗು ಈ ಪ್ರದೇಶದಲ್ಲಿ ಜನದಟ್ಟನೆಯಿರುತ್ತದೆ. ಮತ್ತು ಮದುವೆ ಸಮಾರಂಭ ನಡೆಯುವ ಮಾಸವಾಗಿದ್ದು, ಚಿನ್ನಾಭರಣ ಖರೀದಿ ಜೋರಾಗಿಯೇ ನಡೆಯುತ್ತದೆ.

ಈ ಸಂದರ್ಭವನ್ನು ಬಳಸಿಕೊಂಡು ವೃದ್ಧೆಯರು ತಮ್ಮ ಕೈಚಳಕ ತೋರಿಸಿದ್ದಾರೆ. ಇಂತಹ ಕಳ್ಳತನ ಪ್ರಕರಣ ಪಟ್ಟಣದಲ್ಲಿ ಪದೇ ಪದೇ ಮರುಕಳಿಸುತ್ತಿದ್ದು ವ್ಯಾಪಾರಸ್ಥರು ಜಾಗರೂಕರಾಗಿರಬೇಕಿದೆ. ಹಾಗೂ ಪೊಲೀಸರು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಜನರ ಒತ್ತಾಸೆಯಾಗಿದೆ.

ಈ ಮೂವರು ಮಂದಿ ಚಾಲಾಕಿ ಮುದುಕಿಯರು ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸ್ಥಳಕ್ಕೆ ಚನ್ನರಾಯಪಟ್ಟಣದ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin