ಭಿಕ್ಷೆ ಬೇಡಿ ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿದ್ದ ವೃದ್ಧೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Old-Women--01

ಮೈಸೂರು, ಜೂ.26- ಭಿಕ್ಷೆ ಬೇಡಿದ ಹಣದಲ್ಲಿ ದೇವಸ್ಥಾನಕ್ಕೆ ದೇಣಿಗೆ ನೀಡಿದ ವೃದ್ಧೆ ಮರಣ ಹೊಂದಿದ್ದಾರೆ. ಎಂ.ಎನ್.ಸೀತಾ(92) ನಿಧನರಾಗಿರುವ ವೃದ್ಧೆ. ಮೃತರು ನಗರದ ಪಡುವಾರಳ್ಳಿಯ ಪ್ರಸನ್ನ ಆಂಜನೇಯ ದೇವಸ್ಥಾನದ ಹತ್ತಿರ ಸಣ್ಣ ಮನೆ ಮಾಡಿಕೊಂಡಿದ್ದು, ದೇವಸ್ಥಾನದ ಬಳಿ ಕುಳಿತು ಹಲವಾರು ವರ್ಷಗಳಿಂದ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಇವರು ದೇವಸ್ಥಾನದ ಅಭಿವೃದ್ಧಿಗಾಗಿ ಭಿಕ್ಷೆ ಬೇಡಿದ ಹಣದಲ್ಲಿ ಕಳೆದ ಮೂರು ತಿಂಗಳ ಹಿಂದೆ ಎರಡು ಲಕ್ಷ ಹಣವನ್ನು ನೀಡಿದ್ದರು.

ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ನಿನ್ನೆ ನಿಧನರಾಗಿದ್ದಾರೆ. ಇವರು ವಿವಾಹವಾಗದೆ ಒಬ್ಬರೇ ಜೀವನ ಸಾಗಿಸುತ್ತಿದ್ದರು. ಯಾರೂ ಇಲ್ಲದ ಹಿನ್ನೆಲೆಯಲ್ಲಿ ದೇವಸ್ಥಾನದ ಟ್ರಸ್ಟಿಗಳೇ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Facebook Comments

Sri Raghav

Admin