‘ನನಗೆ ದಮ್ಕಿ ಹಾಕಿದ್ರೆ ಪರಿಣಾಮ ನೆಟ್ಟಗಿರಲ್ಲ ಹುಷಾರ್’ : ಒಳ್ಳೆ ಹುಡ್ಗ ಪ್ರಥಮ್
ಬೆಂಗಳೂರು,ಆ.17-ನನಗೆ ಬೆದರಿಕೆ ಹಾಗೂ ದಮ್ಕಿ ಹಾಕುವುದನ್ನು ನಿಲ್ಲಿಸಿ. ನಾನು ಸಂಯಮ ಕಳೆದುಕೊಂಡರೆ ಪರಿಣಾಮ ಚೆನ್ನಾಗಿರಲ್ಲ ಎಂದು ನಟ ಪ್ರಥಮ್ ಎಚ್ಚರಿಕೆ ನೀಡಿದ್ದಾರೆ.
ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೇಸ್ಬುಕ್ ನಲ್ಲಿ ಪ್ರಥಮ್ ಹಾಕಿದ್ದ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ಘಟನೆ ನಡೆದ ಬಳಿಕ ಮೊದಲ ಬಾರಿಗೆ ಪೋಸ್ಟ್ ಹಾಕಿದ್ದ ಪ್ರಥಮ್, ನನಗೆ ತುಂಬಾ ನೋವಾಗಿದ್ದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಪತ್ನಿಯ ಕಣ್ಣೀರು ನೋಡಿ.
ಹೆಣ್ಣುಮಕ್ಕಳು ಮನೆಯಲ್ಲಿರುವ ವಸ್ತುಗಳ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಅದು ಸುಟ್ಟು ಹೋದಾಗ ತುಂಬಾ ನೋವಾಗುತ್ತದೆ. ಹೆಣ್ಣು ಮಗಳ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬರೆದುಕೊಂಡಿದ್ದರು.
ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ಬೆಂಬಲಿಸಿ ದಲಿತ ನಾಯಕ ಅಖಂಡ ಶ್ರೀನಿವಾಸ್ಮೂರ್ತಿ ಅವರನ್ನು ತುಳಿದರೆ ಕಾಂಗ್ರೆಸ್ಗೆ ನಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ನಿನ್ನೆ ರಾತ್ರಿ ಕೆಜೆಹಳ್ಳಿ ಆರೋಪಿಗಳು ಅಮಾಯಕರಂತೆ, ಅವರನ್ನು ಬಿಟ್ಟುಬಿಡಬೇಕೆಂದು ಆರೋಪಿಗಳು ಪೋಷಕರು ಒತ್ತಡ ಹೇರುತ್ತಿದ್ದಾರೆ. ಬರಿ ಬಿಡೋದೇನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸು ಮಾಡೋಣ ಎಂದು ಪ್ರಥಮ್ ಲೇವಡಿ ಮಾಡಿದ್ದರು.
ಅಷ್ಟಕ್ಕೆ ಸುಮ್ಮನಾಗದೆ ಮತ್ತೊಂದು ವಿವಾದಿತ ಪೋಸ್ಟ್ ಕೂಡ ಹಾಕಿದ್ದರು. ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ಆ ಕುರಿತಂತೆ ಬರೆದುಕೊಂಡಿರುವ ಪ್ರಥಮ್, ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು ನನ್ನ ಪೋಸ್ಟ್ ಡಿಲೀಟ್ ಮಾಡಿದ್ದೇನೆ.
ಯಾವ ಭಯದಿಂದ ಅಲ್ಲ. ಸುಮಾರು 200 ಜನರು ನನ್ನ ಆಫೀಸ್ನ ನಂಬರ್ಗೆ ಅಸಭ್ಯ ಮಾತುಗಳಲ್ಲಿ ಬೆದರಿಕೆ ಹಾಕಿದ್ದಾರೆ. ಎಲ್ಲವೂ ಸ್ಕ್ರೀನ್ ಶಾರ್ಟ್ ತೆಗೆಯಲಾಗಿದೆ. ಬೆದರಿಕೆ ನಿಲ್ಲಿಸದಿದ್ದರೆ ಗೃಹ ಸಚಿವರು ಹಾಗೂ ಪೆÇಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ದೂರು ಕೊಟ್ಟರೆ ನಿಮಗೆ ತೊಂದರೆಯಾಗುತ್ತದೆ. ನಿಮ್ಮ ಕುಟುಂಬದವರಿಗೆ ನಷ್ಟವಾಗುತ್ತದೆ. ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ನಾನು ತಾಳ್ಮೆಯಿಂದ ಇದ್ದೇನೆ. ನೀವು ಕೆರಳಿಸುತ್ತಲೇ ಇದ್ದರೆ ಅದರ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಪ್ರಥಮ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ಮತ್ತೆ ಪೆÇೀಸ್ಟ್ ಹಾಕಿರುವ ಪ್ರಥಮ್, ಗೃಹ ಸಚಿವರ ವಿಶೇಷ ಅಕಾರಿ ಬಳಿ ಮಾತನಾಡಿದ್ದೇನೆ. ಖುದ್ದಾಗಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಥಮ್ ಅವರ ಪೋಸ್ಟ್ ಹಾಗೂ ಹೇಳಿಕೆಗಳು ಗಂಭೀರ ಚರ್ಚೆಗೆ ಕಾರಣವಾಗಿವೆ.