ಪೊಲೀಸ್ ಕಮೀಷನರ್ ಹೆಸರಿನಲ್ಲೇ OLX ಮೂಲಕ ವಂಚಿಸುತ್ತಿದ್ದ ಐವರು ವಂಚಕರು ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.14- ಓಎಲ್‍ಎಕ್ಸ್‍ನಲ್ಲಿನ ಜಾಹಿರಾತು ಗಳ ವಸ್ತುಗಳನ್ನು ಸ್ವತಃ ಖರೀದಿಸುವುದಾಗಿ ಮತ್ತು ಮಾರಾಟ ಮಾಡುವುದಾಗಿ ನಂಬಿಸಿ ಕ್ಯೂಆರ್ ಕೋಡ್‍ನ್ನು ಕಳುಹಿಸಿ ಸ್ಕ್ಯಾನ್ ಮಾಡಿಸಿಕೊಂಡು ಹಣ ಲಪಟಾಯಿಸಿದ್ದ 5 ಮಂದಿ ವಂಚಕರನ್ನು ಸಿಸಿಬಿ ಪೊಲೀಸರು ಮತ್ತು ಸೈಬರ್ ಕ್ರೈಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿ ಆರು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ಕರಣ್ ಸಿಂಗ್(35), ಅಕ್ರಮ್ ಖಾನ್(18), ಹ್ಯಾರೀಸ್(21), ಜಮೀಲ್(42)ಮತ್ತು ಮಹೆಜರ್(20) ಬಂಧಿತ ವಂಚಕರಾಗಿದ್ದು, ಇವರ ಬಂಧನದಿಂದ 200ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ರಾಜಸ್ಥಾನದಲ್ಲಿ ಓಲೆಕ್ಸ್ ಹಾಗೂ ಸಂಬಂಧಿತ ಆಪ್‍ನಲ್ಲಿ ಜಾಹಿರಾತುಗಳ ಮೂಲಕ ಬರುವ ವಸ್ತುಗಳನ್ನು ಖರೀದಿಸುವ ನೆಪವೊಡ್ಡಿ, ಸಾರ್ವಜನಿಕರನ್ನು ನಂಬಿಸಿ ತಾವು ಕಳುಹಿಸುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ತಿಳಿಸಿ ವಂಚಿಸಿರುವ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಸಿಸಿಬಿ ಇನ್‍ಸ್ಪೆಕ್ಟರ್ ಹಜರೀಶ್ ಮತ್ತು ಸೈಬರ್ ಕ್ರೈಂ ಇನ್‍ಸ್ಪೆಕ್ಟರ್ ಪ್ರಶಾಂತ್ ಬಾಬು ನೇತೃತ್ವದಲ್ಲಿ ಡಿಸೆಂಬರ್‍ನಲ್ಲಿ ಕಾರ್ಯಾಚರಣೆ ಕೈಗೊಂಡಾಗ ಆರೋಪಿಗಳು ರಾಜಸ್ಥಾನದವರೆಂದು ತಿಳಿದು ಅಲ್ಲಿಗೆ ತೆರಳಿದ ಸಿಸಿಬಿ ಪೊಲೀಸರು ಕರಣ್‍ಸಿಂಗ್ ಎಂಬಾತನನ್ನು ಬಂಧಿಸಿದ್ದರು.  ಈತನ ಬಂಧನದ ಬಳಿಕ ಬೆಂಗಳೂರು ಪೊಲೀಸರ ಮೇಲೆ ಜಿದ್ದಿಗೆ ಸೈಬರ್ ವಂಚಕರು ಕಮೀಷನರ್ ಭಾಸ್ಕರ್ ರಾವ್ ಅವರ ಹೆಸರಿನಲ್ಲೇ ಆನ್‍ಲೈನ್‍ನಲ್ಲಿ ವಂಚಿಸಿದ್ದರು.

ರಾಜಸ್ಥಾನದ ಬರಕ್‍ಪುರ್‍ನಲ್ಲಿ ಆರೋಪಿಗಳು ವಾಸವಾಗಿದ್ದರು. ಬೆಸಿಕಲಿ ವೆಟನರಿ ಹಾಸ್ಪಿಟಲ್‍ನಲ್ಲಿ ಆರೋಪಿ ಕರಣ್‍ಸಿಂಗ್ ಕಾಂಪೌಂಡರ್ ಆಗಿದ್ದ. ರಾಜಸ್ಥಾನದ ಒಂದು ಹಳ್ಳಿಯ ಪ್ರತಿ ಮನೆಯಲ್ಲಿ ಎರಡರಿಂದ ಮೂರು ಅಕೌಂಟ್‍ಗಳನ್ನು ಆರೋಪಿಗಳು ಓಪೆನ್ ಮಾಡಿಸಿದ್ದರು. ಒಂದು ಬಾರಿ ಖಾತೆಗೆ ಹಣ ಬಂದ ಮೇಲೆ ಅಕೌಂಟ್ ಕ್ಲೋಸ್ ಮಾಡಿಸುತ್ತಿದ್ದ ಆರೋಪಿಗಳು ಅಕೌಂಟ್ ಓಪನ್ ಮಾಡಿದವರಿಗೆ ಪರ್ಸಂಟೇಜ್ ರೀತಿ ಹಣ ಪಾವತಿ ಮಾಡುತ್ತಿದ್ದು ತೀವ್ರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಆರೋಪಿ ಜಮೀಲ್ ಮೋಟಾರು ಕಳವು ಪ್ರಕರಣದ ಹಳೆ ಆರೋಪಿಯಾಗಿದ್ದು, ಎಂಟು ಕಳವು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದಾನೆ. ಮತ್ತೊಬ್ಬ ಆರೋಪಿ ಕರಣ್ ಸಿಂಗ್ ಬ್ಯಾಂಕ್ ಅಕೌಂಟ್ ಹೋಲ್ಡರ್ ಆಗಿದ್ದು, ಹ್ಯಾರೀಸ್ ಖಾನ್ ಎಚ್‍ಡಿಎಫ್‍ಸಿ ಮತ್ತು ಗೂಗಲ್ ಪೇಟಿಯಂ ಸಂಸ್ಥೆಗಳ ಮಾಜಿ ನೌಕರನಾಗಿದ್ದು, ಕ್ಯೂಆರ್ ಕೋಡ್ ಪೊರ್ಜ್‍ನಲ್ಲಿ ಪಳಗಿದ್ದಾನೆ. ಆರೋಪಿಗಳಾದ ಮೆಹಜರ್ ಮತ್ತು ಅಕ್ರಮ್ ಖಾನ್ ಇವರಿಬ್ಬರು ಗ್ರಾಹಕರ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ತಮ್ಮ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದು ತನಿಖೆಯಿಂದ ದೃಢಪಟ್ಟಿದೆ.

ದೇಶವ್ಯಾಪಿ ಆನ್‍ಲೈನ್ ವಂಚನೆ:
ಈ ಐದು ಮಂದಿ ಆರೋಪಿಗಳು ಕಳೆದ ವರ್ಷ ಓಲೆಕ್ಸ್ ಮೂಲಕ ದೇಶವ್ಯಾಪಿ ವಂಚಿಸಿದ್ದ 316 ಪ್ರಕರಣದ ಪೈಕಿ 200ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಜಾಹಿರಾತು ನೀಡಿದವರಿಗೆ ಮಾಲುಗಳನ್ನು ಕೊಂಡುಕೊಳ್ಳುವುದಾಗಿ ಚಾಟ್ ಮಾಡುತ್ತಿದ್ದರು. ನಂತರ ಬೆಂಗಳೂರಿನ ವಿಳಾಸ ನೀಡಿ ಅಡ್ವಾನ್ಸ್ ಹಣ ಕೊಡುವುದಾಗಿ ಮಾಲುಗಳನ್ನು ಪಡೆದು ವಂಚಿಸಿದ್ದರು. ಹಣ ಕಳುಹಿಸಲು ಗೂಗಲ್ ಪೇ ಮತ್ತು ಫೋನ್ ಪೇ ಸೇರಿದ ಕ್ಯೂಆರ್ ಕೋಡ್ ಕಳುಹಿಸುತ್ತಿದ್ದರು.

ಭಾರತೀಯ ಸೇನೆ ಹೆಸರೇಳಿಕೊಂಡು ವಂಚನೆ:
ಭಾರತೀಯ ಸೇನೆ ಹೆಸರು ಹೇಳಿ ಅತಿ ಹೆಚ್ಚು ವಂಚನೆ ನಡೆಸುತ್ತಿದ್ದಲ್ಲದೆ, ಬೆಂಗಳೂರು ಕಮೀಷನರ್ ಭಾಸ್ಕರ್ ರಾವ್ ಹೆಸರಿನಲ್ಲಿ ಮೋಸ ಮಾಡಿದ್ದ ಗ್ಯಾಂಗ್ ಹುಳಿಮಾವು ನಿವಾಸಿಯೊಬ್ಬರಿಗೆ ಟ್ರೆಡ್ ಮಿಲ್ ಕೊಂಡುಕೊಳ್ಳುವುದಾಗಿ ನಂಬಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ.

Facebook Comments