ಹಾಕಿಯಲ್ಲಿ ಒಲಂಪಿಕ್ ಚಾಂಪಿಯನ್ ಆರ್ಜೆಂಟೈನಾವನ್ನು ಮಣಿಸಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ಬ್ಯೂನಸ್‍ಏರಿಸ್, ಏ.7-ಅರ್ಜೆಂಟೈನಾ ಪ್ರವಾಸ ಕೈಗೊಂಡಿರುವ ಭಾರತೀಯ ಹಾಕಿ ತಂಡ ಅಭ್ಯಾಸ ಪಂದ್ಯದಲ್ಲಿ ಓಲಂಪಿಕ್ ಚಾಂಪಿಯನ್ ತಂಡವನ್ನು ಪರಾಭವಗೊಳಿಸಿ ಸಕಾರಾತ್ಮಕ ಆರಂಭ ಪಡೆದಿದೆ. ಒಲಂಪಿಕ್ ಚಾಂಪಿಯನ್ ಅರ್ಜೇಂಟೈನಾ ತಂಡವನ್ನು 4.3ಗೋಲುಗಳ ಅಂತರದಿಂದ ಮಣಿಸಿ ಭಾರತ ಶುಭಾರಂಭ ಮಾಡಿದೆ.

ಪಂದ್ಯದ 16ನೇ ನಿಮಿಷದಲ್ಲಿ ನೀಲಕಂಠ ಶರ್ಮ ಮೊದಲ ಗೋಲು ಭಾರಿಸಿದರು. 28ನೆ ನಿಮಿಷದಲ್ಲಿ ಹರಮ್‍ಪ್ರೀತ್ ಸಿಂಗ್, 33ನೇ ನಿಮಿಷದಲ್ಲಿ ರೂಪಿಂದರ್‍ಪಾಲ್ ಸಿಂಗ್ ಹಾಗೂ 47 ನೇ ನಿಮಿಷದಲ್ಲಿ ವರುಣ್‍ಕುಮಾರ್ ಗೋಲು ಭಾರಿಸಿ ಭಾರತದ ಗೆಲುವಿನ ರೂವಾರಿಗಳೆನಿಸಿಕೊಂಡರು.

ಆರಂಭದಲ್ಲು ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದವು. ನಂತರ ಉತ್ತಮ ಆಟವಾಡಿದ ಭಾರತೀಯ ಆಟಗಾರರು ಎದುರಾಳಿಗಳ ಮೇಲೆ ಮುಗಿಬಿದ್ದು 4 ಗೋಲು ಗಳಿಸುವ ಮೂಲಕ ಮೇಲಗೈ ಸಾಧಿಸಿದರು.

Facebook Comments