ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿ 50 ಭಾರತೀಯ ಕ್ರೀಡಾಪಟುಗಳು ಭಾಗಿ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ, ಜುಲೈ 22 (ಪಿವಿಐ) ಶುಕ್ರವಾರ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಮಾರ್ಚ್ ಪಾಸ್ಟ್‍ನಲ್ಲಿ ಸುಮಾರು 50 ಭಾರತೀಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಲ್ಲಿದ್ದಾರೆ ಭಾರತ ಪುರುಷರ ಹಾಕಿ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಆರು ಬಾರಿ ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಎಂ ಸಿ ಮೇರಿ ಕೋಮ್ ಅವರನ್ನು ತ್ರಿವರ್ಣ ಧ್ವಜ ಹಿಡಿದು ಮುನ್ನದೆಸಲಿದ್ದಾರೆ.

ಕ್ರೀಡಾಕೂಟದಲ್ಲಿ ಭಾರತವನ್ನು 125 ಕ್ಕೂ ಹೆಚ್ಚು ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ ,ಕರೋನಾ ಬೀತಿಯಿಂದ ಮರು ದಿನ ನೆಡೆಯುವ ಸ್ಪರ್ದೆಗೆ ತಯಾರಿಮಾಡಿಕೊಳ್ಳುವುದ್ದಾಗಿ 44 ಕ್ಕೂ ಹೆಚ್ಚು ಮಂದಿ ಮಾರ್ಚ್ ಪಾಸ್ಟ್‍ನಲ್ಲಿ ಭಾಗವಹಿಸುವುದಿಲ್ಲ.  ನಮ್ಮ ಕ್ರೀಡಾಪಟುಗಳು ಸೋಂಕಿಗೆ ಒಳಗಾಗುವ ಪರಿಸ್ಥಿತಿಯನ್ನು ಸೃಷ್ಟಿಸಲು ನಾವು ಇಷ್ಟಪಡುವುದಿಲ್ಲ.

ಆದ್ದರಿಂದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಸಂಖ್ಯೆಯನ್ನು 50 ರೊಳಗೆ ಸೀಮಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದರು. ಇಂದು ಬೆಳಿಗ್ಗೆ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಧಿಕಾರಿಗಳು, ತರಬೇತುದಾರರು, ಇತರ ಸಹಾಯಕ ಸಿಬ್ಬಂದಿ ಸೇರಿ ಒಟ್ಟಾರೆ 228 ಮಂದಿ ಇಲ್ಲಿದ್ದೇವೆ ಮೊದಲ ಸ್ಪರ್ಧೆಯ ದಿನದಂದು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶೂಟರ್‍ಗಳಾದ ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಅಪೂರ್ವಿ ಚಂದೇಲಾ ಮತ್ತು ಎಲವೆನಿಲ್ ವಲರಿವನ್ ಭಾಗವಹಿಸಲಿದ್ದಾರೆ. ಬಾಕ್ಸಿಂಗ್, ಬಿಲ್ಲುಗಾರಿಕೆ ಮತ್ತು ಪುರುಷರ ಮತ್ತು ಮಹಿಳಾ ಹಾಕಿ ಸ್ಪರ್ಧಿಸಲಿವೆ.ಈ ಭಾರಿ ಗಮನಾರ್ಹ ಸಾಧನೆಗೆ ಎಲ್ಲರು ಉತ್ಸುಕರಾಗಿದ್ದಾರೆ

Facebook Comments