ಬಿಜೆಪಿ ಸಂಸದ ಓಂ ಬಿರ್ಲಾ ಲೋಕಸಭಾ ಸ್ಪೀಕರ್..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.18-ಬಿಜೆಪಿ ಸಂಸದ ಓಂ ಬಿರ್ಲಾ ಲೋಕಸಭಾಧ್ಯಕ್ಷರ ಹುದ್ದೆಗೆ ಎನ್‍ಡಿಎಯಿಂದ ನಾಮ ನಿರ್ದೇಶನವಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜಸ್ತಾನದ ಕೋಟಾ-ಬಂಡಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಓಂ ಬಿರ್ಲಾ ಎನ್‍ಡಿಎ ಸ್ಪೀಕರ್ ಅಭ್ಯರ್ಥಿಯಾಗಿ ನೇಮಕಗೊಂಡರೆ, ಸದನದಲ್ಲಿ ಸ್ಪಷ್ಟ ಬಹುಮತ ಹೊಂದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಲೋಕಸಭಾಧ್ಯಕ್ಷರಾಗಿ ಸುಲಭವಾಗಿ ಆಯ್ಕೆಯಾಗುತ್ತಾರೆ.

ನಾಳೆ ಲೋಕಸಭಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಯಲಿದೆ. ಸ್ಪೀಕರ್ ಹುದ್ದೆಗಾಗಿ ವಿರೋಧ ಪಕ್ಷಗಳು ಈವರೆಗೆ ಯಾವುದೇ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ.

57 ವರ್ಷದ ಬಿರ್ಲಾ, ರಾಜಸ್ತಾನದಿಂದ ಮೂರು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ. ಓಂ ಬಿರ್ಲಾ ಚುನಾಯಿತರಾದರೆ, ಎಂಟು ಬಾರಿ ಸಂಸದರಾಗಿದ್ದ ಸುಮಿತ್ರಾ ಮಹಾಜನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

ಸಾಮಾನ್ಯವಾಗಿ, ಲೋಕಸಭಾ ಸ್ಪೀಕರ್ ಹುದ್ದೆಗೆ ಹಿರಿಯರನ್ನು ನೇಮಕ ಮಾಡುವುದು ವಾಡಿಕೆ. ಆದರೆ ಈ ಮಹತ್ವದ ಹುದ್ದೆಗೆ ಒಂದು ಬಾರಿ ಮತ್ತು ಎರಡು ಬಾರಿ ಸಂಸದರಾಗಿರುವವರನ್ನೂ ಆಯ್ಕೆ ಮಾಡಿದ ನಿದರ್ಶನಗಳಿವೆ.

2002ರಲ್ಲಿ ಲೋಕಸಭಾಧ್ಯಕ್ಷರಾಗಿದ್ದ ಮನೋಹರ್‍ಜೋಷಿ ಅವರು ಆಗ ಮೊದಲ ಬಾರಿ ಚುನಾುತರಾದ ಸಂಸದರಾಗಿದ್ದರು. ಎರಡು ಬಾರಿ ಎಂಪಿಯಾಗಿ ಸ್ಪೀಕರ್ ಆಗಿದ್ದ ಜಿ.ಎಂ.ಸಿ ಬಾಲಯೋಗಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ನಂತರ ಜೋಷಿ ಲೋಕಸಭಾಧ್ಯಕ್ಷರಾಗಿದ್ದರು.

Facebook Comments

Sri Raghav

Admin