8 ತಿಂಗಳ ನಂತರ ಓಮರ್ ಅಬ್ದುಲ್ಲಾ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಮಾ.24-ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಪೆರೆನ್ಸ್ ನಾಯಕ ಓಮರ್ ಅಬ್ದುಲ್ಲಾ (50) ಅವರನ್ನು ಎಂಟು ತಿಂಗಳ ಬಳಿಕ ಇಂದು ಬೆಳಗ್ಗೆ ಬಿಡುಗಡೆ ಮಾಡಲಾಗಿದೆ.

ಇದರಿಂದಾಗಿ 232 ದಿನಗಳ ಗೃಹಬಂಧನ ಅಂತ್ಯಗೊಂಡಂತಾಗಿದೆ. ಕಳೆದ ವರ್ಷ ಆಗಸ್ಟ 5ರಂದು ಆರ್ಟಿಕಲ್ 370 ರದ್ದತಿ ನಂತರ ಅಬ್ದುಲ್ಲಾ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಫೆಬ್ರವರಿ 5ರಂದು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‍ಎ) ಅನ್ವಯ ಅವರನ್ನು ಬಂಧಿಸಲಾಗಿತ್ತು.

ನಿನ್ನೆ ಈ ಕಾಯ್ದೆ ಅಡಿ ಅವರ ಬಂಧನವನ್ನು ರದ್ದುಗೊಳಿಸಿ, ಇಂದು ಬೆಳಗ್ಗೆ ಬಿಡುಗಡೆ ಮಾಡಲಾಗಿದೆ. ಓಮರ್ ಅಬ್ದುಲ್ಲಾ ಬಿಡುಗಡೆಯನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕರು ಮತ್ತು ಕಾರ್ಯಕರ್ತರು ಸ್ವಾಗತಿಸಿದ್ದಾರೆ.

Facebook Comments

Sri Raghav

Admin