ಟಿವಿಗಳಲ್ಲಿ ಎಕ್ಸಿಟ್ ಪೋಲ್ ನೋಡಿ ನೋಡಿ ಸಾಕಾಗೋಗಿದೆ : ಒಮರ್ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮುಕಾಶ್ಮೀರ,ಮೇ 20- ಚುನಾವಣಾ ಫಲಿತಾಂಶಕ್ಕೆ ಇನ್ನೇನು ಒಂದೆರಡು ದಿನಗಳು ಬಾಕಿ ಇವೆ. ಆದರೂ ಸುದ್ದಿ ಮಾಧ್ಯಮಗಳು ಚುನಾವಣೋತ್ತರ(ಎಕ್ಸಿಟ್ ಫೋಲ್) ಸಮೀಕ್ಷೆಗಳ ಬಗ್ಗೆ ನಿರಂತರ ಚರ್ಚಿಸುತ್ತಲೇ ಇವ. ಇದರಿಂದ ಸಾಕಾಗಿಹೋಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅಸಮಾಧಾನ ವ್ಯಕ್ತಪಡಿದ್ದಾರೆ.

ಚುನಾವಣೋತ್ತರ ಫಲಿತಾಂಶದ ಬಗ್ಗೆ ತಮ್ಮ ಟ್ವೀಟ್‍ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರತಿ ಸಮೀಕ್ಷೆಗಳು ಕೂಡ ಬಿಜೆಪಿ ನೇತೃತ್ವದ ಮೈತ್ರಿಯ ಗೆಲುವಿನ ಸಾಧ್ಯತೆಯ ಪರವಾಗಿಯೇ ವರದಿ ಮಾಡುತ್ತಿವೆ ಯಾವೊಂದು ಸಮೀಕ್ಷೆಯೂ ಇದಕ್ಕೆ ವ್ಯತಿರಿಕ್ತವಾಗಿಲ್ಲ ಏಕೆ ಎಂದು ಪ್ರಶ್ನಿಸಿದರು. ಈಗಾಗಲೇ ಕೆಲವು ಸಮೀಕ್ಷೆ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಎನ್‍ಡಿಎ ಗೆಲುವು ಸಾಧಿಸಲಿವೆ ಎಂದೇ ಹೇಳಿವೆ.

ಎಲ್ಲ ಸಮೀಕ್ಷೆಗಳು ನಿಜವೆಂದು ಹೇಳಲು ಆಗುವುದಿಲ್ಲ. ಪ್ರಪಂಚವೇ ಮೇ 23ರ ಫಲಿತಾಂಶದ ಬಗ್ಗೆ ಕಾತುರರಾಗಿ ನಿರೀಕ್ಷಿಸುತ್ತಿವೆ. ಇಂತಹ ಸಂದರ್ಭದಲ್ಲಿ ಫಲಿತಾಂಶ ಪೂರ್ವ ಸಮೀಕ್ಷೆಗಳು ಇಂತಹ ವರದಿಗಳಿಗೆ ಹೆಚ್ಚು ಆದ್ಯತೆ ನೀಡಿವೆ. ಮೊದಲು ಚಾನೆಲ್‍ಗಳನ್ನು ಆಫ್ ಮಾಡಬೇಕು, ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಬೇಕಿದೆ. ಮತ ಎಣಿಕೆಯ ದಿನವನ್ನು ಪರಿಗಣಿಸಬೇಕಿದೆ ಎಂದರು.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು 150 ಸ್ಥಾನಗಳನ್ನೂ ಪಡೆಯುವಲ್ಲಿ ವಿಫಲವಾಗಿವೆ ಎಂದು ಹಲವು ಸಮೀಕ್ಷೆಗಳು ಸೂಚಿಸುತ್ತವೆ. ಎನ್‍ಡಿಎ ನೇತೃತ್ವದ ಬಿಜೆಪಿ 300ಕ್ಕೂ ಸ್ಥಾನಗಳನ್ನು ಪಡೆಯಲಿವೆ ಎಂದು ಹೇಳಲಾಗುತ್ತಿವೆ. ಇದು ನಿರಾಧಾರ ಎಂದು ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ