ಓಮಿಕ್ರಾನ್ ಭೀತಿ, ಲಸಿಕೆಗೆ ಮುಗಿಬಿದ್ದ ಜನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30- ಓಮಿಕ್ರಾನ್ ವೈರಸ್ ಆತಂಕದ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ನಗರದ ಬಹುತೇಕ ವ್ಯಾಕ್ಸಿನ್ ಕೇಂದ್ರಗಳತ್ತ ಜನರು ಮುಖ ಮಾಡುತ್ತಿರುವ ಮಂದಿ ಸರದಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಲಸಿಕೆ ಹಾಕಿಸಿಕೊಳ್ಳದ ಯುವ ಜನತೆ ಹೊಸ ವೈರಸ್‍ಗೆ ಭಯಭೀತರಾಗಿ ನಾ ಮುಂದು ತಾ ಮುಂದು ಎಂದು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಮೊದಲ ಡೋಸ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಗಮಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಶೇ.60ರಷ್ಟು ಏರಿಕೆಯಾಗಿದೆ. ಇಷ್ಟು ದಿನ ಒಂದು ಸೆಂಟರ್‍ನಲ್ಲಿ 200 ರಿಂದ 250 ವ್ಯಾಕ್ಸಿನ್ ಹಾಕಲಾಗುತ್ತಿತ್ತು. ಕಳೆದ ಮೂರು ದಿನಗಳಿಂದ 450ರಷ್ಟು ವ್ಯಾಕ್ಸಿನ್ ನೀಡಲಾಗುತ್ತಿದೆ.

Facebook Comments