ಇಟಲಿ, ಜರ್ಮನಿಯಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್,ನ.28- ಇಟಲಿ ಮತ್ತು ಜರ್ಮನಿಯಿಂದ ಬಂದಿರುವ ವರದಿಗಳು ಈ ಎರಡೂ ದೇಶಗಳಲ್ಲಿ ಓಮಿಕ್ರಾನ್ ರೂಪಾಂತರಿ ಕೋವಿಡ್ ಪ್ರಕರಣಗಳು ದೃಢಪಟ್ಟಿರುವುದಾಗಿ ತಿಳಿಸಿವೆ. ವೇಜಾಂಬಿಕ್‍ಗೆ ಪ್ರಯಾಣಿಸಿದ್ದ ಓರ್ವ ಇಟಾಲಿಯನ್‍ಗೆ ಓಮಿಕ್ರಾನ್ ರೂಪಾಂತರಿಯ ಪರೀಕ್ಷೆ ಪಾಸಿಟಿವ್ ಬಂದಿದೆ ಎಂದು ಇಟಲಿಯ ಲಾಪ್ರೆಸೆ ವಾರ್ತಾ ಸಂಸ್ಥೆ ಹೇಳಿದೆ.

ಈ ಔದ್ಯಮಿಕ ಪ್ರಯಾಣಿಕ ನವೆಂಬರ್ 11ರಂದು ರೋಮ್‍ನಲ್ಲಿ ಬಂದಿಳಿದು ನೇಪಲ್ಸ್ ಹತ್ತಿರದ ತನ್ನ ಮನೆಗೆ ಹಿಂದಿರುಗಿದ್ದರು. ಇಬ್ಬರು ಶಾಲಾ ವಯಸ್ಸಿನ ಮಕ್ಕಳು ಸೇರಿದಂತೆ ಆತನ ಕಕುಟುಂಬದ ಐವರಿಗೆ ಕೂಡ ಓಮಿಕ್ರಾನ್ ಪಾಸಿಟಿವ್ ಬಂದಿದೆ. ಎಲ್ಲರೂ ಕ್ಯಾಎರ್ಟಾದ ನೇಪಲ್ಸ್ ಹೊರವಲಯದಲ್ಲಿ ಐಸೋಲೇಷನ್‍ನಲ್ಲಿದ್ದಾರೆ. ಇವರೆಲ್ಲರಿಗೆ ಲಘು ಲಕ್ಷಣಗಳಿದ್ದು, ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಈ ರೂಪಾಂತರಿಯನ್ನು ಮಿಲಾನ್‍ನ ಸಾಕ್ಕೋ ಆಸ್ಪತ್ರೆ ಮತ್ತು ಇಟಲಿಯ ನ್ಯಾಷನಲ್ ಹೆಲ್ತ್ ಇನ್‍ಸ್ಟಿಟ್ಯೂಟ್ ದೃಢಪಡಿಸಿವೆ. ಈ ವ್ಯಕ್ತಿ ಎರಡು ಡೋಸ್ ಲಸಿಕೆ ಪಡೆದಿದ್ದರು ಎಂದು ಅವರು ಹೇಳಿವೆ.ಇಟಲಿಯ ಆರೋಗ್ಯ ಸಚಿವಾಲಯವು ದಕ್ಷಿಣ ಆಫ್ರಿಖಾದಲ್ಲಿ ಮೊದಲು ಗುರುತಿಸಲಾದ ಈ ಹೊಸ ರೂಪಾಂತರಿ ವೈರಸ್‍ನ ಪತ್ತೆ ಕಾರ್ಯವನ್ನು ಎಲ್ಲಾ ಪ್ರದೇಶಗಳಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಜರ್ಮನಿಯಲ್ಲಿ ಮ್ಯೂನಿಚ್ ಮೂಲಕ ಮೈಕ್ರೋ ಬಯಾಲಜಿ ಕೇಂದ್ರವಾದ ಮ್ಯಾಕ್ಸ್‍ವಾನ್ ಪೆಟ್ಟೆನ್‍ಕೋಫೆರ್ ಇನ್‍ಸ್ಟಿಟ್ಯೂಟ್ ಪ್ರಕಾರ ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಿಂದ ವಿಮಾನದಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ ಓಮಿಕ್ರಾನ್ ರೂಪಾಂತರಿ ದೃಢಪಟ್ಟಿದೆ.

ಈ ನಿಟ್ಟಿನಲ್ಲಿ ಜಿನೋಮ್ ಸೀಕ್ವೆನ್ಸಿರ್‍ಗೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದ್ದರೂ ಇದು ಓಮಿಕ್ರಾನ್ ರೂಪಾಂತರಿ ಎಂಬುದರಲ್ಲಿ ಸಂದೇವಹವೇ ಇಲ್ಲ ಎಂದು ಸಂಸ್ಥೆಯ ಮುಖ್ಯಸ್ಥ ಅಲಿವರ್ ಕೆಲ್ಪರ್ ಹೇಳಿರುವುದಾಗಿ ಜರ್ಮನ್ ಸುದ್ದಿಸಂಸ್ಥೆ ಡಿಪಿ ವರದಿ ಮಾಡಿದೆ.

Facebook Comments

Sri Raghav

Admin