ಲಸಿಕೆ ಪಡೆಯದವರಿಗೆ ಓಮೈಕ್ರಾನ್ ಮಾರಣಾಂತಿಕವಾಗುವ ಸಾಧ್ಯತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕೆಪ್ ಟೌನ್, ಡಿ.6- ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಓಮೈಕ್ರಾನ್ ಸೋಂಕು 12 ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಬಾಧಿಸುತ್ತಿದ್ದು, ದಕ್ಷಿಣ ಆಫ್ರಿಕಾದ ಆಸ್ಪತ್ರೆಗಳ ಮಕ್ಕಳ ದಾಖಲಾತಿ ಪ್ರಮಾಣ ದಿಡೀರ್ ಏರಿಕೆಯಾಗಿದೆ.

ಕೋವಿಡ್ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ವರದಿಗಳಿದ್ದವು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿರುವ ರೂಪಾಂತರಿ ಸೋಂಕು ವಯಸ್ಕರನ್ನೇ ಬಾಧಿಸುತ್ತಿದೆ. ತಡವಾಗಿ ತಿಳಿದು ಬಂದ ಮಾಹಿತಿಗಳ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಮಕ್ಕಳು ಓಮೈಕ್ರಾನ್ ನಿಂದ ಹೆಚ್ಚಾಗಿ ಬಳಲುತ್ತಿರುವುದು ಖಚಿತವಾಗಿದೆ. ಮಕ್ಕಳು ಅತಿ ಹೆಚ್ಚು ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ವರದಿಯಾಗಿದೆ.

ಲಸಿಕೆ ಪಡೆಯದ ವರ್ಗವನ್ನು ಓಮೈಕ್ರಾನ್ ತೀವ್ರವಾಗಿ ಬಾಧಿಸಲಿದೆ. ಸುದೀರ್ಘ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಮತ್ತು ಸಾವಿನ ಸಾಧ್ಯತೆಗಳು ಹೆಚ್ಚಿರುವ ಅಂಶಗಳು ಸಂಶೋಧನೆಯಲ್ಲಿ ಪತ್ತೆಯಾಗಿವೆ.

ಕೋವಿಡ್ ನಿರೋಧಕ ಒಂದು ಲಸಿಕೆ ಪಡೆದು ಎರಡನೇ ಲಸಿಕೆ ಪಡೆಯದಿದ್ದವರು ಓಮೈಕ್ರಾನ್ ದಾಳಿಗೆ ಒಳಗಾಗಲಿದ್ದಾರೆ. ಎರಡು ಡೋಸ್ ಲಸಿಕೆ ಪಡೆದವರು ಹೆಚ್ಚು ಸುರಕ್ಷಿತ ವಲಯದಲ್ಲಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin