ಬಿಗ್ ಬ್ರೇಕಿಂಗ್ : ಭಾರತಕ್ಕೂ ಒಮಿಕ್ರಾನ್ ಎಂಟ್ರಿ, ಕರ್ನಾಟಕದಲ್ಲೇ 2 ಕೇಸ್ ಪತ್ತೆ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ವಿಶ್ವದ 29 ದೇಶಗಳಿಗೆ ಹಬ್ಬಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕು ಈಗ ಭಾರತಕ್ಕೂ ಕಾಲಿಟ್ಟಿದ್ದು, ಅದರಲ್ಲೂ ಕರ್ನಾಟಕದಲ್ಲಿ ಮೊದಲು ಕಾಣಿಸಿಕೊಂಡಿದೆ. 44 ಮತ್ತು 66 ವರ್ಷದ ಇಬ್ಬರು ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ತೀವ್ರ ಆತಂಕದ ನಡುವೆಯೂ ಓಮಿಕ್ರಾನ್ ಕಾಣಿಸಿಕೊಂಡಿದೆ. ಕಳೆದ ವಾರ 95 ಮಂದಿ ದಕ್ಷಿಣಾ ಆಫ್ರಿಕಾದಿಂದ ಆಗಮಿಸಿದ್ದರು. ಅವರಲ್ಲಿ ಇಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ತಿಳಿಸಿದ್ದಾರೆ.

ಇಬ್ಬರ ಪೈಕಿ ಒಬ್ಬರು 30 ವರ್ಷದಿಂದ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದು, ವ್ಯಾಪಾರೋದ್ದೇಶದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇನ್ನೊಬ್ಬ ವ್ಯಕ್ತಿ ಬೆಂಗಳೂರಿನವರೇ ಎಂದು ಹೇಳಲಾಗಿದೆ.

ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿ ಬೆಂಗಳೂರಿನ ಸ್ಟಾರ್ ಹೋಟೆಲ್‍ನಲ್ಲಿ ನೆಲೆಸಿದ್ದರು, ಅವರೊಂದಿಗೆ 211 ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಸೋಂಕಿತರ ಪೈಕಿ ಒಬ್ಬ ವಾಪಸ್ ದಕ್ಷಿಣ ಅಫ್ರಿಗಾಗೆ ತೆರಳಿದ್ದು ಮತ್ತೊಬ್ಬ ವ್ಯಕ್ತಿ ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2020ರ ಆರಂಭದಲ್ಲಿ ನೇರೆಯ ಕೇರಳದಲ್ಲಿ ಕೊರೊನಾ ಪತ್ತೆಯಾಗಿತ್ತು. ಸೋಂಕು ತೀವ್ರವಾದ ವೇಳೆ ಮೊದಲ ಸಾವು ಸಂಭವಿಸಿದ್ದು, ಕರ್ನಾಟಕದಲ್ಲಿ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೊರೊನಾ ತನ್ನ ಆರ್ಭಟವನ್ನು ಆರಂಭಿಸಿತ್ತು.

ಎರಡನೇ ಅಲೆಯಲ್ಲೂ ಕರ್ನಾಟಕ ಭಾರತ ಭಾರೀ ಸಂಕಷ್ಟ ಎದುರಿಸಿತ್ತು. ಇತ್ತೀಚೆಗೆ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಕೊರೊನಾ ಕಡಿಮೆಯಾಗಿದೆ ಎನ್ನುತ್ತಿದ್ದಂತೆ ಜನ ಮೈಮರೆತಿದ್ದರು.

Facebook Comments

Sri Raghav

Admin