ಚುನಾವಣಾ ರ‍್ಯಾಲಿಯಲ್ಲಿ ಶಿವಸೇನೆ ಸಂಸದನ ಹತ್ಯೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.16(ಪಿಟಿಐ)- ಚುನಾವಣಾ ಪ್ರಚಾರ ರ‍್ಯಾಲಿ ವೇಳೆ ಶಿವಸೇನೆ ಸಂಸದ ಓಂ ರಾಜೆ ನಿಂಬಾಳ್ಕರ್ ಅವರನ್ನು ಕೊಲ್ಲಲು ದುಷ್ಕರ್ಮಿಯೊಬ್ಬ ವಿಫಲ ಯತ್ನ ನಡೆಸಿದ ಘಟನೆ ಇಂದು ಬೆಳಗ್ಗೆ ಒಸಮಾನಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕಲಂಬ್ ತಾಲ್ಲೂಕಿನ ಪಡೋಲಿ ನೈಗಾಂಗ್ ಗ್ರಾಮದಲ್ಲಿ ಇಂದು ಬೆಳಗ್ಗೆ ನಿಂಬಾಳ್ಕರ್ ಅವರು ಬಿಜೆಪಿ-ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ರ್ಕರ್ತನ ಸೋಗಿನಲ್ಲಿ ವೇದಿಕೆ ಏರಿದ ದುಷ್ಕರ್ಮಿಯೊಬ್ಬ ಅವರ ಕೈ ಕುಲುಕುವ ನೆಪದಲ್ಲಿ ಚಾಕುವಿನಿಂದ ಅವರ ಹೊಟ್ಟೆಗೆ ಚುಚ್ಚಲು ಯತ್ನಿಸಿದ.

ತಕ್ಷಣ ಎಚ್ಚೆತ್ತ ಸಂಸದರು ಕೈಯನ್ನು ಅಡ್ಡ ಹಿಡಿದರು. ಚಾಕು ಅವರ ಕೈಗೆ ಆಳವಾಗಿ ಗಾಯ ಮಾಡಿತು. ತಕ್ಷಣ ದುಷ್ಕರ್ಮಿ ಅಲ್ಲಿಂದ ಪರಾರಿಯಾದ. ಆತನನ್ನು ಭದ್ರತಾ ಪಡೆಗಳು ಮತ್ತು ಇತರ ಕಾರ್ಯಕರ್ತರು ಬೆನ್ನಟ್ಟಿದರಾದರೂ ಆತ ಪರಾರಿಯಾಗುವಲ್ಲಿ ಯಶಸ್ವಿಯಾದ. ಕೈಗಡಿಯಾರ ಇದ್ದಿದ್ದರಿಂದ ತೀವ್ರ ಗಾಯ ಆಗುವುದು ತಪ್ಪಿದಂತಾಗಿದೆ.

ಶಿವಸೇನೆ ಸಂಸದ ಓಂ ರಾಜೆ ನಿಂಬಾಳ್ಕರ್ ಅವರ ತಂದೆ ಮತ್ತು ಕಾಂಗ್ರೆಸ್ ಮುಖಂಡ-ಸಂಸದ ಪವನ್ ರಾಜೆ ನಿಂಬಾಳ್ಕರ್ ಅವರನ್ನು ಜೂನ್ 3, 2006ರಲ್ಲಿ ಮುಂಬೈ-ಪುಣೆ ಎಕ್ಸ್‍ಪ್ರೆಸ್ ಹೆದ್ದಾರಿಯ ಕಲಂಬೋಳಿ ಬಳಿ ದುಷ್ಕರ್ಮಿಗಳು ಅವರ ಕಾರಿನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

Facebook Comments