ಗುಜರಾತ್‍ನಲ್ಲಿ 1.50 ಕೋಟಿ ರೂ. ಮೌಲ್ಯದ ನಿಷೇಧಿತ ಕರೆನ್ಸಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಸೂರತ್ (ಗುಜರಾತ್), ಜು.30- ಕೇಂದ್ರ ಸರ್ಕಾರ ರದ್ದುಗೊಳಿಸಿದ ಕರೆನ್ಸಿ ನೋಟುಗಳ ಅಕ್ರಮ ದಂಧೆ ದೇಶದ ವಿವಿಧೆಡೆ ವರದಿಯಾಗುತ್ತಿದ್ದು, ಗುಜರಾತ್‍ನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಸೂರತ್‍ನಲ್ಲಿ 40 ವರ್ಷದ ವ್ಯಕ್ತಿಯೊಬ್ಬರನ್ನು ಬಂಧಿಸಿರುವ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು 1.5 ಕೋಟಿ ರೂ. ಮೌಲ್ಯದ ರದ್ದಾದ ಹಳೆ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರವೀಣ್ ಮುಖಿಯಾ ಬಂಧಿತ ವ್ಯಕ್ತಿ. ಸೂರತ್‍ನಲ್ಲಿರುವ ಈತನ ಮನೆ ಮೇಲೆ ದಾಳಿ ನಡೆಸಿದ ಎಟಿಎಸ್ ಸಿಬ್ಬಂದಿ ರದ್ದಾದ 500 ಮತ್ತು 1000ರೂ. ಮುಖಬೆಲೆಯ ಒಟ್ಟು 1.5 ಕೋಟಿ ರೂ. ಮೌಲ್ಯದ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೆ ಗುಜರಾತ್‍ನಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ 40 ಲಕ್ಷ ರೂ. ಮೌಲ್ಯದ ರದ್ದಾದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Facebook Comments

Sri Raghav

Admin