ಸೆಂಚುರಿ ಬಾರಿಸಿದ ಈರುಳ್ಳಿ ಬೆಲೆ, ಜನಸಾಮಾನ್ಯನ ಜೀವನ ಕಷ್ಟ ಕಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21 -ಕೊರೊನಾ ಸಂಕಷ್ಟದ ನಡುವೆ ಈಗ ತಾನೆ ಚೇತರಿಸಿಕೊಳ್ಳುತ್ತಿರುವ ಜನರಿಗೆ ಪ್ರತಿ ದಿನ ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಮತ್ತೆ ಪರದಾಡುವಂತಾಗಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ವಿಜಯಪುರ, ಹುಬ್ಬಳ್ಳಿ, ಧಾರವಾಡ ಪ್ರದೇಶಗಳಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಮೀನುಳಲ್ಲಿ ನೀರು ನಿಂತು ಫಸಲು ಕೊಳೆತ್ತಿದ್ದು, ಹಾಲಿ ದಾಸ್ತಾನು ಇರುವ ಮಾಲು ಮಾತ್ರ ಮಾರುಕಟ್ಟೆಗೆ ಸರಬರಾಜಗುತ್ತಿದೆ, ಅಲ್ಲದೆ ಹೆಚ್ಚಾಗಿ ಆವಕವಾಗುತ್ತಿದ್ದ ಮಹಾರಾಷ್ಟ್ರದಲ್ಲೂ ಸಹ ಮಳೆಯಾಗುತ್ತಿದ್ದು ಅಲ್ಲಿಂದಲೂ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ ಹಾಗಾಗಿ ಬೆಲೆ ಧಿಡೀರ್ ಏರಿಕೆಯಾಗುತ್ತಲೆ ಇದೆ,

ಉತ್ತಮ ಈರುಳ್ಳಿ ಸಗಟು ದರದಲ್ಲಿ ಕೆ,ಜಿಗೆ 100 ರೂ.ಇದೆ. ಇನ್ನು ಚಿಲ್ಲರೆ ವಾಪಾರದಲ್ಲಿ ಸಾಮಾನ್ಯ ಗುಣಮಟ್ಟಕ್ಕೆ 80 ರಿಂದ 90 ರೂ ಗೆ ಮಾರಟವಾಗುತ್ತಿದೆ, ಇದರಿಂದ ಗ್ರಾಹಕರ ಕಣ್ಣಲ್ಲಿ ನೀರು ತರುವಂತಾಗಿದೆ, ಲಾಕ್‍ಡೌನ್ ನಂತರ ಚೇತರಿಸಿಕೊಳ್ಳುತ್ತಿರುವ ಹೋಟೆಲ್, ಪಾನಿಪುರಿ, ಗೊಬಿಮಂಚೂರಿ, ಚರುಮುರಿ ವ್ಯಾಪಾರಿಗಳಿಗೆ ದೊಡ್ಡನಷ್ಟವಾಗುತ್ತಿದೆ ಇದರಿಂದ ವ್ಯಾಪಾರಿಗಳು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ, ಕೆಲವರು ವ್ಯಾಪಾರ ಬಿಡಬಾರದೆಂದು ಈರುಳ್ಳಿ ಬದಲಿಗೆ ಎಲೆಕೋಸು ಮೊರೆಹೋಗಿದ್ದಾರೆ.

ಮತ್ತೆ ಕೆಲವರು ವ್ಯಾಪರವನ್ನೆ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ, ಅಲ್ಲದೆ ಲಾಕ್‍ಡೌನ್ ನಿಂದ ಕೆಲಸವಿಲ್ಲದೆ ಈರುಳ್ಳಿ ಮಾರಾಟಕ್ಕಿಳಿದಿದ್ದವರಿಗೂ ಬೆಲೆ ಏರಿಕೆ ಇವರ ಜೀವನಕ್ಕೂ ಕೊಳ್ಳಿಇಟ್ಟಿದೆ.ಮಳೆಯಿಂದಾಗಿ ಶೇ,70 ರಷ್ಟು ಬೆಳೆ ಹಾನಿಯಾಗಿದ್ದು ಉತ್ಪಾದನೆ ಕುಂಠಿತವಾಗಿದೆ. ಹೆಚ್ಚು ಪೂರೈಕೆಯಾಗದ ಕಾರಣ ದಿಢೀರ್ ಬೆಲೆ ಏರಿಕೆಗೆ ಕಾರಣವಾಗಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರ್ತಕರು ತಿಳಿಸಿದ್ದಾರೆ.

ರೆಟ್ ಎಷ್ಟೇ ಆದ್ರೂ ಅಡುಗೆಗೆ ಈರುಳ್ಳಿ ಬಳಸಲೇ ಬೇಕು, ಇಲ್ಲಾ ಅಂದ್ರೆ ಅಡುಗೆ ರುಚಿ ಬರುವುದಿಲ್ಲ. ನಾಲ್ಕು ಈರುಳ್ಳಿ ಬದಲಿಗೆ ಎರಡಾದರೂ ಬಳಸಬೇಕಲ್ವಾ ಅಂತಾ ಗೃಹಿಣಿ ಜ್ಯೋತಿಲಕ್ಷ್ಮಮ್ಮ ಅವರು ತಿಳಿಸಿದ್ದಾರೆ, ಒಂದು ದಿನ ಈರುಳ್ಳಿ ಇಲ್ಲದೆ ಅಡುಗೆ ಮಾಡಬಹುದು ದಿನಾ ಈರುಳ್ಳಿ ಇಲ್ಲದೆ ಅಡುಗೆ ಮಾಡಲು ಸಾಧ್ಯನಾ ಎಂದು ಮಲ್ಲತ್ತಳ್ಳಿಯ ನಿವಾಸಿ ಕುಸುಮಾ ತಿಳಿಸಿದ್ದಾರೆ.

ಮುಂದಿನ ವಾರ ಆಯುಧ ಪೂಜೆ ವಿಜಯದಶಮಿ ಹಬ್ಬ ಇದೆ. ಮೊದಲೇ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ ಮತ್ತೆ ದಿನದಿಂದ ದಿನಕ್ಕೆ ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ನಮ್ಮಂತ ಮಧ್ಯಮ ವರ್ಗದ ಜನ ಸರಳವಾಗಿಯೂ ಹಬ್ಬಮಾಡುವಂತಿಲ್ಲ ಎಂದು ಪ್ರತಿಭಾ ಎಂಬುವವರು ತಿಳಿಸಿದ್ದಾರೆ. ಮೊದಲೆ ಕೊರೋನಾ ದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಧ್ಯಮ ಹಾಗೂ ಜನಸಾಮಾನ್ಯರ ಜೀವನ ಬೆಲೆ ಏರಿಕೆಯಿಂದ ಅಕ್ಷರ ಸಹ ಕಷ್ಟಕ್ಕೆ ಸಿಲುಕಿದೆ.

Facebook Comments