ಜುಲೈ 3 ರಿಂದ ಆನ್‌ಲೈನ್ ತರಗತಿ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ,ಜು.1- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2018-19 ನೇ ಸಾಲಿನಲ್ಲಿ ದ್ವಿತೀಯ ವರ್ಷದ ಬಿ.ಎ, ಬಿ.ಕಾಂ, ಮತ್ತು 2019-20 ನೇ ಸಾಲಿನ ಜುಲೈ/ಜನವರಿ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದಿರುವ ಪ್ರಥಮ ಬಿ.ಎ., ಬಿ.ಕಾಂ., ಬಿ.ಲಿಬ್.ಐ.ಎ.ಸ್ಸಿ, ಎಂ.ಎ., ಎಂ.ಕಾಂ, ಎಂ.ಎಸ್ಸಿ., ಎಂ.ಬಿ.ಎ, ಎಂ.ಲಿಬ್.ಐ.ಎಸ್ಸಿ, ಹಾಗೂ ಬಿ.ಎಡ್, ವಿದ್ಯಾರ್ಥಿಗಳು ಪ್ರವೇಶಾತಿ ಸಂದರ್ಭದಲ್ಲಿ ಆಯ್ಕೆ ಮಾಡಿಕೊಂಡಿರುವ ಕೌಶಲ್ಯಾಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ತರಗತಿಗಳನ್ನು ಕೋವಿಡ್-19 ಕಾರಣದಿಂದಾಗಿ ಭೌತಿಕವಾಗಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆನ್‌ಲೈನ್ ಮುಖಾಂತರ ಕಾರ್ಯಕ್ರಮಗಳನ್ನು ಜುಲೈ 3 ರಿಂದ ಜುಲೈ 14 ರ ವರೆಗೆ ನಡೆಸಲಾಗುವುದು.

ಕೌಶಲ್ಯಾಭಿವೃದ್ಧಿ ತರಬೇತಿಯ ಪಠ್ಯ ವಿಷಯ ಮತ್ತು ವೇಳಾಪಟ್ಟಿಯನ್ನು ಕರಾಮುವಿಯ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ ಹಾಗೂ ಇದರ ಸದುಪಯೋಗವನ್ನು ಹೆಚ್ಚಿನ ವಿದ್ಯಾರ್ಥಿಗಳು ಪಡೆಯಬೇಕೆಂದು ಪ್ರಾದೇಶಿಕ ನಿರ್ದೇಶಕರಾದ ಡಾ. ವಿಜಯ್ ಪ್ರಕಾಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಯೋಜನಾಧಿಕಾರಿಗಳು ದೂ. ಸಂಖ್ಯೆ: 9611434810 ಹಾಗೂ ರಾಮನಗರ ಪ್ರಾದೇಶಿಕ ಕೇಂದ್ರ, ಶಾಂತಿನಿಕೇತನ, ಸಮೂಹ ಶಿಕ್ಷಣ ಸಂಸ್ಥೆಗಳು, ಬಿ.ಎಂ.ರಸ್ತೆ, ರಾಮನಗರ. ದೂರವಾಣಿ ಸಂಖ್ಯೆ: 9353382684, 8660460261 ಮತ್ತು 9743184848 ಅನ್ನು ಸಂಪರ್ಕಿಸಬಹುದಾಗಿದೆ.

Facebook Comments

Sri Raghav

Admin