ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.21- ಜನಸಾಮಾನ್ಯರ ಜೀವ ಹಾನಿಗೆ ಕಾರಣವಾಗುತ್ತಿರುವ ಆನ್‍ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಅಪ್ಲಿಕೇಶನ್ ಹಾಗೂ ವೆಬ್‍ಸೈಟ್‍ಗಳನ್ನು ನಿಷೇಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಆನ್‍ಲೈನ್‍ಗಳನ್ನು ನಿಷೇಧಿಸಿ ಸುಗ್ರೀವಾಜ್ಞೆ ಜಾರಿಗೊಳಿಸಿದೆ.

ಕೇಂದ್ರಾಡಳಿತ ಪ್ರದೇಶ ಪುದಿಚೇರಿ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಜತೆಯಲ್ಲಿ ಕೇಂದ್ರ ಸರ್ಕಾರವೇ ನೇರವಾಗಿ ಆನ್‍ಲೈನ್ ಗೇಮ್‍ಗಳನ್ನು ಮತ್ತು ಆನ್‍ಲೈನ್ ಬೆಟ್ಟಿಂಗ್ ಸೈಟ್‍ಗಳನ್ನು ನಿಷೇಧಿಸಬೇಕು ಎಂಬ ಒತ್ತಾಯ ಮಾಡಿದೆ. ತಮಿಳುನಾಡಿನಲ್ಲಿ ಆನ್‍ಲೈನ್‍ನಲ್ಲಿ ಹಣ ಕಳೆದುಕೊಂಡ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದ್ದು , ರಮ್ಮಿ ಸೇರಿದಂತೆ ಆನ್‍ಲೈನ್ ಬೆಟ್ಟಿಂಗ್ ಗೇಮ್‍ಗಳನ್ನು ನಿಷೇvಸಲಾಗಿದೆ.

ಸುಗ್ರೀವಾಜ್ಞೆಗೆ ತಮಿಳುನಾಡಿನ ರಾಜ್ಯಪಾಲರು ಸಹಿ ಹಾಕಿದ್ದಾರೆ. ನೂತನ ಕಾನೂನಿನ ಪ್ರಕಾರ ಆನ್‍ಲೈನ್‍ನಲ್ಲಿ ಹಣ ಹೂಡುವುದು ಶಿಕ್ಷಾರ್ಹ ಅಪರಾಧವಾಗಿದೆ. 5,000 ರೂ. ದಂಡ, 6 ತಿಂಗಳಿನಿಂದ 2 ವರ್ಷಗಳವರೆಗೆ ಶಿಕ್ಷೆ ವಿಸುವ ಅವಕಾಶವಿದೆ. ಕರ್ನಾಟಕ ಸರ್ಕಾರ ಕೂಡ ಆನ್‍ಲೈನ್ ಗೇಮ್‍ಗಳನ್ನು ನಿಷೇಧಿಸುವ ಚಿಂತನೆ ನಡೆಸಿದೆ. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡ ಹೇಳಿಕೆ ನೀಡಿದ್ದಾರೆ.

ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀಪೆರ್ದನ್ನು ನೀಡಿ ಆನ್‍ಲೈನ್ ಗೇಮ್ ನಿಷೇಧಕ್ಕೆ ಸೂಚನೆ ನೀಡಿತ್ತು. ಆನ್‍ಲೈನ್ ಗೇಮ್‍ಗಳ ಮೂಲಕ ಬೆಟ್ಟಿಂಗ್ ಮಾಡಿ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಕೊಯಮತ್ತೂರು ಭಾಗದಲ್ಲಿ ಮೂರು ಮಂದಿ ಲಕ್ಷಾಂತರ ರೂ. ಹಣ ಕಳೆದುಕೊಂಡು ನಷ್ಟ ಅನುಭವಿಸಿದ್ದು , ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಲ್ಲಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಕೇಂದ್ರ ಸರ್ಕಾರವೇ ನೇರವಾಗಿ ಆನ್‍ಲೈನ್ ಗೇಮ್‍ಗಳನ್ನು ನಿಷೇಧ ಮಾಡಬೇಕೆಂದು ಪಾಂಡಿಚೇರಿ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

Facebook Comments