ಬಲಿಗಾಗಿ ಬಾಯ್ತೆರೆದು ಕಾಯುತ್ತಿವೆ ಕೊಳವೆ ಬಾವಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕನಾಯಕನಹಳ್ಳಿ , ಜ.24-ಪುರಸಭೆಯವರು ಕೊರೆದಿರುವ ತೆರೆದ ಕೊಳವೆ ಬಾವಿಗಳು ಪಟ್ಟಣದಲ್ಲಿ ಸಾಕಷ್ಟು ಇದ್ದು ಅಪಾಯಕ್ಕೆ ಎಡೆ ಮಾಡಿದ್ದರೂ ಅ?ಕಾರಿಗಳು ಇವುಗಳನ್ನು ಕಂಡರೂ ಜಾಣ ಕುರುಡಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆಗೆ ಅತಿ ಹೆಚ್ಚು ಆದಾಯ ನೀಡುವ ವಿದ್ಯಾ ನಗರ ಒಂದನೆ ವಾqರ್?ನ ಮುಖ್ಯ ರಸ್ತೆಯಲ್ಲೇ ತೆರೆದ ಬಾವಿ ಇದೆ. ಸಣ್ಣ ಮಕ್ಕಳು ಪ್ರತಿ ದಿನ ಈ ಬಾವಿಯ ಸಮೀಪದಲ್ಲೇ ಆಟವಾಡುತ್ತಿರುತ್ತಾರೆ ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಈ ತೆರೆದ ಬಾವಿಗೆ ಅಳವಡಿಸಿದ್ದ ಮೋಟಾರು ಪಂಪ್ , ಕೇಬಲ್ ಗಳು ನಾಪತ್ತೆಯಾಗಿವೆ. ಈ ಕೂಡಲೇ ತೆರೆದ ಬಾವಿಗಳನ್ನು ಮುಚ್ಚಲು ಅ?ಕಾರಿಗಳು ಕ್ರಮ ಕೈಗೊಳ್ಳಬೇಕು. ದುರಂತ ನಡೆಯುವ ಮೊದಲೇ ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Facebook Comments

Sri Raghav

Admin