ಪಕ್ಷಾಂತರ ನಿಷೇಧ ಕಾಯ್ದೆ ನಿಯಮಾವಳಿ ರೂಪಿಸಲು ಅಭಿಪ್ರಾಯ ನೀಡುವಂತೆ ಸಾರ್ವಜನಿಕರಲ್ಲಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಪಕ್ಷಾಂತರ ನಿಷೇಧ ಕಾಯಿದೆಗೆ ಸಂಬಂಧಿಸಿದಂತೆ ಭಾರತ ಸಂವಿಧಾನದ ಹತ್ತನೇ ಅನುಸೂಚಿಯಲ್ಲಿ ರಚಿಸಲಾಗಿರುವ ನಿಯಮಾವಳಿ ರೂಪಿಸಲು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕರ್ನಾಟಕ ವಿಧಾನಸಭಾ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಸಾರ್ವಜನಿಕರಲ್ಲಿ, ವಿಶೇಷವಾಗಿ ತಜ್ಞರಲ್ಲಿ ಮನವಿ ಮಾಡಿದ್ದಾರೆ.

ಹತ್ತನೇ ಅನುಸೂಚಿಯಲ್ಲಿನ ವಿಷಯಗಳು ಹಲವೊಮ್ಮೆ ಚರ್ಚೆಯ ವಿಷಯವಾಗಿರುವುದರಿಂದ ಹತ್ತನೇ ಅನುಸೂಚಿ ಹಾಗೂ ಅದಕ್ಕೆ ಸಂಬಂಧಿತ ನಿಯಮಮಾವಳಿಗಳನ್ನು ಪರಿಶೀಲಿಸಲು ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನಾಧ್ಯಕ್ಷರೂ ಆದ ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ರಾಜಸ್ಥಾನ ವಿಧಾನ ಸಭಾಧ್ಯಕ್ಷ ಡಾ.ಸಿ.ಪಿ.ಜೋಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದಾರೆ.

ವಿಧಾನಸಭಾಧ್ಯಕ್ಷರಾದ ವಿಶ್ವೇಶರ ಹೆಗೆಡೆ ಕಾಗೇರಿ ಹಾಗೂ ಒಡಿಶಾ ವಿಧಾನಸಭಾಧ್ಯಕ್ಷರಾದ ಡಾ.ಸೂಜ್ರ್ಯ ನಾರಾಯಣ ಪಾತ್ರೊ ಅವರೂ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮುನ್ನ, ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ಆದಕಾರಣ, ಈ ದಿಸೆಯಲ್ಲಿ ಅಭಿಪ್ರಾಯವನ್ನು ನೀಡಲು ಇಚ್ಛಿಸುವವರು ಜೂ.10ರ ಸಂಜೆ 5 ಗಂಟೆಯೊಳಗೆ ವಿಧಾನಸಭೆಯ ಕೊಠಡಿ ಸಂಖ್ಯೆ 121ರಲ್ಲಿರುವ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಅಂಚೆಯ ಮೂಲಕ ಕಳುಹಿಸಬಹುದಾಗಿದೆ.

ಫ್ಯಾಕ್ಸ್ ಸಂಖ್ಯೆ : 080 – 2225 8301 ಮೂಲಕ ಅಭಿಪ್ರಾಯಗಳನ್ನು ಕಳುಹಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin