ಆಸ್ಕರ್ ಪ್ರಶಸ್ತಿ 2020 : ಪ್ಯಾರಾಸೈಟ್, 1917, ಜೋಕರ್‌ ಚಿತ್ರಗಳಿಗೆ ಪ್ರಶಸ್ತಿಗಳ ಸುರಿಮಳೆ…!

ಈ ಸುದ್ದಿಯನ್ನು ಶೇರ್ ಮಾಡಿ

ಲಾಸ್ ಏಂಜೆಲ್ಸ್, ಫೆ.10-ಚಿತ್ರರಂಗದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾದ ಪ್ರತಿಷ್ಠಿತ ಆಸ್ಕರ್ 2020 ಅವಾರ್ಡ್‍ಗಳನ್ನು ಸಾಧಕರಿಗೆ ನೀಡಲಾಗಿದ್ದು, ಪ್ಯಾರಾಸೈಟ್, 1917 ಮತ್ತು ಜೋಕರ್ ಸಿನಿಮಾಗಳಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ.  ಅಮೆರಿಕದ ಕ್ಯಾಲಿಪೋರ್ನಿಯಾ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ನಡೆದ ಅದ್ಧೂರಿ ವರ್ಣರಂಜಿತ ಸಮಾರರಂಭದಲ್ಲಿ ಚಿತ್ರರಂಗದ ಸಾಧಕರಿಗೆ 2020ನೇ ಸಾಲಿನ ಆಸ್ಕರ್ (92ನೇ ಸಾಲಿನ ಅಕಾಡೆಮಿ) ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಬೊಂಗ್ ಜೂನ್ ನಿರ್ದೇಶನದ ದಕ್ಷಿಣ ಕೊರಿಯಾದ ಪ್ಯಾರಾಸೈಟ್ ಸಿನಿಮಾ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗಳಿಸಿ ಹೊಸ ದಾಖಲೆ ನಿರ್ಮಿಸಿದೆ. ವಾರ್ ಡ್ರಾಮಾ 1917 ಮೂರು ಹಾಗೂ ಬಾಕ್ಸ್ ಆಫೀಸ್ ಸೂಪರ್‍ಹಿಟ್ ಚಿತ್ರ ಒಟ್ಟು ಎರಡು ಪ್ರಶಸ್ತಿಗಳನ್ನು ಗಳಿಸಿದೆ.  ಪ್ಯಾರಾಸೈಟ್-ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ಬೊಂಗ್ ಜೂನ್), ಅತ್ಯುತ್ತಮ ಮೂಲ ಚಿತ್ರಕಥೆ ಮತ್ತು ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದೆ.

92 ವರ್ಷಗಳ ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಇದೇ ಮೊದಲ ಬಾರಿಗೆ ಇಂಗ್ಲೀಷೇತರ ಪ್ರತಿಭೆ ಲಭಿಸಿರುವುದು ಹೊಸ ದಾಖಲೆ ಎನಿಸಿದೆ. ಪ್ಯಾರಾಸೈಟ್ ಸಿನಿಮಾಗೆ ಒಟ್ಟು ನಾಲ್ಕು ಪ್ರಶಸ್ತಿಗಳು ದೊರೆತಿರುವುದು ಏಷ್ಯಾ ಖಂಡಕ್ಕೆ ಹೆಮ್ಮೆ ಎನಿಸಿದೆ. ಯುದ್ದ ಕುರಿತ 1917 ಸಿನಿಮಾಗೆ ಅತ್ಯುತ್ತಮ ದೃಶ್ಯ ಪರಿಣಾಮ, ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ಮತ್ತು ಅತ್ಯುತ್ತಮ ಛಾಯಾಚಿತ್ರ ವಿಬಾಗಗಳಲ್ಲಿ ಮೂರು ಆಸ್ಕರ್ ಪ್ರಶಸ್ತಿಗಳು ದೊರೆತಿವೆ.

ಹಾಲಿವುಡ್ ಬಾಕ್ಸ್ ಆಫೀಸ್‍ನ ಅದ್ಭುತ ಯಶಸ್ಸಿನ ಸಿನಿಮಾ ಜೋಕರ್ ಎರಡು ಪ್ರಶಸ್ತಿಗಳನ್ನು ಗಳಿಸಿದೆ. ಅತ್ಯುತ್ತಮ ನಟನೆಗಾಗಿ ಜೋವಾಕ್ವಿನ್ ಫೀನಿಕ್ಸ್ ಆಸ್ಕರ್ ಪ್ರಶಸ್ತಿ ಗಳಿಸಿದ್ದಾರೆ. ಇದೇ ಚಿತ್ರದ ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ಬೆಸ್ಟ್ ಒರಿಜಿನಲ್ ಸ್ಕೋರ್ ಪ್ರಶಸ್ತಿ ಗಳಿಸಿದೆ. ಜೋಕರ್ ಚಿತ್ರದಲ್ಲಿನ ಅದ್ಭುತ ಅಭಿನಯನಕ್ಕಾಗಿ 45 ವರ್ಷದ ನಟ ಫೀನಿಕ್ಸ್ ಅವರಿಗೆ ಈಗಾಗಲೇ ಬಾಫ್ಟಾ, ಗೋಲ್ಡನ್ ಗ್ಲೋಬ್, ಮತ್ತು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅವಾರ್ಡ್ ಪುರಸ್ಕಾರಗಳು ಲಭಿಸಿವೆ.

ಜ್ಯೂಡಿ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಪ್ರತಿಭಾವಂತ ತಾರೆ ರೀನೀ ಝೆಲ್‍ವಗೆರ್ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದಾರೆ. ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ ಸಿನಿಮಾದ ಶ್ರೇಷ್ಠ ನಟನೆಗಾಗಿ ಹಾಲಿವುಡ್ ಖ್ಯಾತ ನಟ ಬ್ರಾಡ್ ಪಿಟ್ ಅವರಿಗೆ ಅತ್ಯುತ್ತಮ ಪೋಷಕ ಅಭಿನೇತ್ರ ಪ್ರಶಸ್ತಿ ದಕ್ಕಿದೆ. ಇದು ಅಭಿನಯಕ್ಕಾಗಿ ಸೂಪರ್ ಸ್ಟಾರ್‍ಗೆ ಲಭಿಸಿದ ಪ್ರಥಮ ಆಸ್ಕರ್ ಪ್ರಶಸ್ತಿಯಾಗಿದೆ.

ಆಸ್ಕರ್ 2020 ಪ್ರಶಸ್ತಿ ಪುರಸ್ಕøತರು :
ಅತ್ಯುತ್ತಮ ಪೋಷಕ ನಟಿ -ಲೌರಾ ಡೆರ್ನ್ (ಮ್ಯಾರೇಜ್ ಪಾರ್ಟಿ)
ಅತ್ಯುತ್ತಮ ಅನಿಮೇಷನ್ ಚಿತ್ರ – ಟಾಯ್ ಸ್ಟೋರಿ-4.
ಅತ್ಯುತ್ತಮ ಅನಿಮೇಷನ್ ಕಿರು ಚಿತ್ರ – ಹೇರ್ ಲವ್.
ಅತ್ಯುತ್ತಮ ಮೂಲ ಚಿತ್ರಕಥೆ – ಪ್ಯಾರಾಸೈಟ್.
ಅತ್ಯುತ್ತಮ ಅಳವಡಿತ ಚಿತ್ರಕಥೆ ಜೊಜೊ ರಾಬಿಟ್
ಅತ್ಯುತ್ತಮ ನೇರ ಕ್ರಿಯಾ ಕಿರುಚಿತ್ರ – ದಿ ನೈಬರರ್ಸ್ ವಿಂಡೋ
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್.
ಅತ್ಯುತ್ತಮ ವಸ್ತ್ರ ವಿನ್ಯಾಸ – ಲಿಟ್ಲ್ ವುಮೆನ್.
ಅತ್ಯುತ್ತಮ ಸಾಕ್ಷ್ಯ ಚಿತ್ರ ಅಮೆರಿಕನ್ ಫ್ಯಾಕ್ಟರಿ.
ಅತ್ಯುತ್ತಮ ಕಿರು ಸಾಕ್ಷ್ಯ ಚಿತ್ರ – ಲರ್ನಿಂಗ್ ಟು ಸ್ಕೇಟ್ ಬೋರ್ಡ್ ಇನ್ ಎ ವಾರ್ ಝೋನ್(ಇಫ್ ಯು ಆರ್ ಎ ಗರ್ಲ್).
ಅತ್ಯುತ್ತಮ ಶಬ್ಧ ಸಂಕಲನ – ಪೋರ್ಡ್ ವರ್ಸಸ್ ಫೆರಾರಿ.
ಅತ್ಯುತ್ತಮ ಚಿತ್ರ ಸಂಕಲನ – ಪೋರ್ಡ್ ವರ್ಸಸ್ ಫೆರಾರಿ.
ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ – ಬಾಂಬ್ ಶೆಲ್.
ಅತ್ಯುತ್ತಮ ಮೂಲ ಗೀತೆ ಐ ಯಾಮ್ ಗೋನಾ ಲವ್ ಮಿ ಎಗೈನ್ (ರಾಕೆಟ್ ಮ್ಯಾನ್).

Facebook Comments