ಕೂಜಂಗಲ್ ಮೇಲೆ ಭಾರೀ ನಿರೀಕ್ಷೆಗಳಿರಲಿಲ್ಲ : ವಿನೋತ್‍ ರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನೈ, ಅ.25- ಭಾರತದ 14 ಚಿತ್ರಗಳ ಸ್ಪರ್ಧೆಯನ್ನು ಹಿಂದಿಕ್ಕಿ ಅಂತರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಸ್ಕರ್‍ಗೆ ನಾಮನಿರ್ದೇಶನಗೊಂಡ ಕೂಜಂಗಲ್ ಚಿತ್ರ ನಿರ್ದೇಶಕರ ಸ್ವ ಅನುಭವ ಆಧರಿಸಿದ ಕಥೆ ಹೊಂದಿದೆ. ಮದ್ಯಪಾನ ವ್ಯಸನಿಯಾಗಿ ದಿನ ನಿತ್ಯ ಜಗಳ ಮಾಡಿ, ಬಡಿಯುತ್ತಿದ್ದ ಪತಿಯನ್ನು ತೊರೆದು ಹೋದ ಪತ್ನಿಯನ್ನು ಹುಡುಕಲು ಚಿಕ್ಕ ವಯಸ್ಸಿನ ಮಗನೊಂದಿಗೆ ಹೋಗುವುದೆ ಚಿತ್ರದ ಕಥಾ ವಸ್ತು. ಚಿತ್ರದಲ್ಲಿ ಹಸಿರು ಭೂಮಿ ಬರದಿಂದಾಗಿ ಬೆಂಗಾಡಾಗುವ ಮನಕಲಕುವ ದೃಶ್ಯಗಳು, ಸಾಂಪ್ರಾದಾಯಿಕ, ಸಾಮಾಜಿಕ ತಲ್ಲಣಗಳಿವೆ.

33 ವರ್ಷದ ನಿರ್ದೇಶಕ ಪಿ.ಎಸ್.ವಿನೋತ್ ರಾಜ್‍ಗೆ ಇದು ಮೊದಲ ಚಿತ್ರ. ತಮಿಳುನಾಡಿನ ಮಧುರೈ ಜಿಲ್ಲೆಯ ವೇಲೂರು ಸಮೀಪದ ಹಳ್ಳಿಯೊಂದರಲ್ಲಿ ಜನಿಸಿ ವಿನೋತ್ ರಾಜ್ ಕಷ್ಟಗಳನ್ನು ಬಗೆ ಹರಿಸಿಕೊಳ್ಳಲು ಚಿಕ್ಕ ವಯಸ್ಸಿನಲ್ಲೇ ದುಡಿಮೆ ಆರಂಭಿಸಬೇಕಾಯಿತು. ಹಲವಾರು ರೀತಿಯ ಕೆಲಸಗಳನ್ನು ಮಾಡಿದ ಅವರು ಡಿವಿಡಿ ಅಂಗಡಿಯಲ್ಲಿ ಕೆಲಸ ಮಾಡುವಾಗ ಚಿತ್ರರಂಗದತ್ತ ಸೆಳೆಯಲ್ಪಟ್ಟರು. ಅದಕ್ಕೂ ಮೊದಲು ತಮ್ಮ ಊರಿನ ಸುತ್ತ ಮುತ್ತ ಚಿತ್ರಕರಣ ನಡೆಯುವಾಗ ಸೆಟ್‍ಗಳಿಗೆ ಭೇಟಿ ನೀಡುತ್ತಿದ್ದ ವಿನೋತ್‍ಗೆ ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆದಿತ್ತು.

2018ರಲ್ಲಿ ಕಥೆ ಬರೆಯಲಾರಂಭಿಸಿದ ವಿನೋತ್‍ಗೆ ಬಂಡವಾಳ ಹಾಕಲು ನಟಿ ನಯನತಾರ ಮತ್ತು ನಿರ್ಮಾಪಕ ವಿಘ್ನೇಶ್ ಸಹಮತ ವ್ಯಕ್ತ ಪಡಿಸಿದರು. 2019ರಲ್ಲಿ ಕೊಜಂಗಲ್ ಚಿತ್ರೀಕರಣ ಆರಂಭಿಸಿ 2020ರ ಡಿಸೆಂಬರ್‍ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಕೊಜಂಗಲ್ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. 2021ರ ಫೆಬ್ರವರಿಯಲ್ಲಿ ಪೆಬೆಲ್ಸ್ ಎಂಬ ಶೀರ್ಷಿಕೆಯ ಮೂಲಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಟೈಗರ್ ಪ್ರಶಸ್ತಿ ಗೆದ್ದಿದೆ.

ತಮ್ಮ ಚಿತ್ರದ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ವಿನೋತ್, ಇದು ಚಿತ್ರತಂಡದ ಒಟ್ಟು ಶ್ರಮದ ಪ್ರತೀಕ. ಹೊಸಬರಾದ ಚೆಲ್ಲಪಂಡಿ ಮತ್ತು ಕರುತ್ತದಯ್ಯ ಅವರು ನಟಿಸಿದ್ದಾರೆ. ಮೂರು ವರ್ಷಗಳ ಪ್ರಯತ್ನ ಈಗ ಫಲ ನೀಡುತ್ತಿದೆ. ತಮಗೆ ಒಳ್ಳೆಯ ಚಿತ್ರಗಳ ಕಲ್ಪನೆಯಿತ್ತು. ಬಹಳಷ್ಟು ಹಿರಿಯರ ಸಿನಿಮಾಗಳನ್ನು ನೋಡಿ ಕಲಿತಿದ್ದೇನೆ. ಉತ್ತಮ ಹಾಗೂ ಸರಳ ಚಿತ್ರ ಮಾಡುವುದಷ್ಟೆ ನನ್ನ ಉದ್ದೇಶವಾಗಿತ್ತು.

ಕೂಜಂಗಲ್‍ಗೆ ಈ ಮಟ್ಟಿನ ಮನ್ನಣೆ ದೊರೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆಸ್ಕರ್‍ಗೆ ತಮ್ಮ ಚಿತ್ರವನ್ನು ನಾಮನಿರ್ದೇಶನ ಮಾಡಿದ ಭಾರತೀಯ ತೀರ್ಪುಗಾರರಿಗೆ ಧನ್ಯವಾದಗಳನ್ನು ಹೇಳುವುದಾಗಿ ತಿಳಿಸಿದರು.  ಬರಗಾಲ ಮತ್ತು ಅವಕಾಶಗಳ ಕೊರತೆಯಿಂದ ಜನ ಹತಾಶರಾಗಿದ್ದಾರೆ. ಅವರ ಮನೋ ಅಭಿವ್ಯಕ್ತಿಯನ್ನು ಚಿತ್ರದಲ್ಲಿ ಬಿಂಬಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ.

Facebook Comments