2 ದಿನಗಳಲ್ಲಿ 100 ಹಸುಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

UPಮುಜಫರ್‍ನಗರ್, ಫೆ.11- ಉತ್ತರಪ್ರದೇಶದ ಮುಜಫರ್‍ನಗರ್ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಸುಮಾರು 100 ಹಸುಗಳು ಮೃತಪಟ್ಟಿವೆ.
ಈ ಘಟನೆ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ವಿಷಪೂರಿತ ಹುಲ್ಲು ಸೇವನೆ ಅಥವಾ ಕಲುಷಿತ ನೀರು ಕುಡಿದು ರಾಸುಗಳು ಮೃತಪಟ್ಟಿರುವ ಶಂಕೆ ಇದೆ ಎಂದು ಉಪವಿಭಾಗೀಯ ದಂಡಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.  ಆರೋಗ್ಯ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆ ಉನ್ನತಾಧಿಕಾರಿಗಳಿಂದ ಈ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

Facebook Comments