2016 ರಲ್ಲಿ ಹಿಂಸಾಚಾರಕ್ಕೆ 16,000 ಇರಾಕಿಗಳು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

Iraq-16000

ಇರ್‍ಬಿಲ್ (ಇರಾಕ್), ಜ.13-ಕಳೆದ ವರ್ಷ (2016) ಇರಾಕ್‍ನಲ್ಲಿ ಭುಗಿಲೆದ್ದ ಹಿಂಸಾಚಾರ ಮತ್ತು ಸೇನಾ ಕಾರ್ಯಾಚರಣೆಗಳಲ್ಲಿ 16,000ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ. ನಾಗರಿಕರ ಸಾವು-ನೋವು ಜಾಡು ಪತ್ತೆ ಮಾಡುವ ಸಂಶೋಧನಾ ಸಮೂಹವೊಂದು ಈ ಅಂಕಿ-ಅಂಶ ನೀಡಿದೆ.  ಅಮೆರಿಕ ನೇತೃತ್ವದ ಸೇನಾ ಕಾರ್ಯಾಚರಣೆ ಕೈಗೊಂಡ 2003ರಿಂದಲೂ ಯುದ್ಧಾಗ್ರಸ್ತ ಇರಾಕ್‍ನಲ್ಲಿ ನಡೆದ ಅತ್ಯಂತ ಭೀಕರ ಹಿಂಸಾಚಾರ ವರ್ಷಗಳಲ್ಲಿ ಒಂದಾಗಿದೆ. 2016ರಲ್ಲಿ 16,361 ನಾಗರಿಕರು ಮೃತಪಟ್ಟಿದ್ದು, ಉತ್ತರ ಪ್ರಾಂತ್ಯದ ನೈನ್‍ವ್ಹೆ ಪ್ರದೇಶವೊಂದರಲ್ಲೀ 7,431 ಜನರು ಹಿಂಸಾಚಾರದಲ್ಲಿ ಹತರಾಗಿದ್ದಾರೆ. ರಾಜಧಾನಿ ಬಾಗ್ದಾದ್‍ನಲ್ಲಿ 3,714 ಮಂದಿ ಸಾವಿಗೀಡಾಗಿದ್ದಾರೆ ಎಂದು ಲಂಡನ್ ಮೂಲಕ ಇರಾಕಿ ಬಾಡಿ ಕೌಂಟ್ ಸಂಸ್ಥೆ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಇರಾಕ್‍ನಲ್ಲಿ 2015 ಮತ್ತು ಮತ್ತು 2014ರಲ್ಲಿ ಕ್ರಮವಾಗಿ 17,578 ಮತ್ತು 20,218 ಮಂದಿ ಹಿಂಸಾಚಾರ ಮತ್ತು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಹತರಾಗಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin