26/11ರ ದಾಳಿಯ ಬಳಿಕ 300ಕ್ಕೂ ಅಧಿಕ ಭದ್ರತಾ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.25- 26/11ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಬಳಿಕ 300ಕ್ಕೂ ಅಧಿಕ ಕರಾವಳಿ ಭದ್ರತಾ ಕಸರತ್ತುಗಳನ್ನು ರಾಜ್ಯದ ಪ್ರಾಧಿಕಾರಗಳ ಜೊತೆಗೂಡಿ ನಡೆಸಲಾಗಿದೆ. ದೇಶದ ಭದ್ರತೆ ಬಿಗಿಗೊಳಿಸುವುದು ಇದರ ಉದ್ದೇಶ ಎಂದು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ)ಯ ಮಹಾನಿರ್ದೇಶಕ ಕೆ.ನಟರಾಜನ್ ಅವರು ಇಂದು ತಿಳಿಸಿದ್ದಾರೆ.

ಪ್ರತಿ ಆರು ತಿಂಗಳಿಗೊಮ್ಮೆ ಐಸಿಜಿ ಯಾವುದಾದರೂ ಒಂದು ಕರಾವಳಿ ರಾಜ್ಯದೊಡಗೂಡಿ ಇಂಥ ಒಂದು ಭದ್ರತಾ ಕಸರತ್ತನ್ನು ನಡೆಸುತ್ತದೆ ಎಂದು ಮುಂಬೈ ಮೇಲಿನ ಉಗ್ರರ ದಾಳಿಯ 13ನೇ ವರ್ಷದ ಮುನಾ ದಿನ ಅವರು ಹೇಳಿದ್ದಾರೆ.

ಕೆಲವೊಮ್ಮೆ ನಾವು ಎರಡು ಕರಾವಳಿ ರಾಜ್ಯಗಳ ಜೊತೆಗೂಡಿ ಈ ಕಸರತ್ತನ್ನು ನಿರ್ವಹಿಸುತ್ತೇವೆ. ಇದರ ಫಲಿತಾಂಶವಾಗಿ ಪ್ರತಿಯೊಬ್ಬರೂ ಭಯೋತ್ಪಾದಕರ ಬೆದರಿಕೆಯೊಂದಿಗೆ ವ್ಯವಹರಿಸಲು ಕೌಶಲ್ಯ ಮತ್ತು ಸಾಮಥ್ರ್ಯವನ್ನನು ಬೆಳೆಸಿಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

2008ರ ನವೆಂಬರ್ 26ರಂದು ಹತ್ತು ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರಮಾರ್ಗದಲ್ಲಿ ಬಂದು ಮುಂಬೈನ ವಿವಿಧ ಭಾಗಗಳಲ್ಲಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರ ಸಾವಿಗೆ ಕಾರಣರಾಗಿದ್ದರು. ಇತರ ಹಲವಾರು ಮಂದಿ ಗಾಯಗೊಂಡಿದ್ದರು. ಘಟನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

Facebook Comments