ವಾಷಿಂಗ್ಟನ್ ವಿವಿ ಪ್ರಕಾರ ಭಾರತದಲ್ಲಿ ಕೊರೋನಾ ಹರಡಲು ಇದೇ ಮುಖ್ಯ ಕಾರಣವಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಮೇ 21- ಭಾರತದಲ್ಲಿ ಸೋಂಕು ರೋಗಗಳು ವ್ಯಾಪಕವಾಗಿ ಹಬ್ಬುತ್ತಿರುವುದಕ್ಕೆ ಕಾರಣವೊಂದನ್ನು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಪತ್ತೆ ಮಾಡಿದ್ದಾರೆ.

ಭಾರತದಲ್ಲಿ ಸುಮಾರು 50 ದಶಲಕ್ಷ(ಐದು ಕೋಟಿ) ಜನರಿಗೆ ಕೈ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಇದೆ ಎಂದು ಯೂನಿರ್ವಸಿಟಿ ಆಫ್ ವಾಷಿಂಗ್ಟನ್‍ನ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವಾಲ್ಯೂವೇಷನ್(ಐಹೆಚ್‍ಎಂಇ) ಸಂಶೋಧಕರು ತಿಳಿಸಿದ್ದಾರೆ.

ಭಾರತದಲ್ಲಿ 3 ಕೋಟಿಗೂ ಅಧಿಕ ಜನರಿಗೆ ಕೈಗಳನ್ನು ಸ್ವಚ್ಛಗೊಳಿಸಲು ಉತ್ತಮ ಗುಣಮಟ್ಟದ ಸಾಬೂನು, ಕಡಿಮೆ ದರದ ಸ್ಯಾನಿಟೈಸರ್ ಮತ್ತು ಸ್ವಚ್ಛ ನೀರು ಲಭ್ಯವಾಗುತ್ತಿಲ್ಲ.

ಅಶುಚಿತ್ವದಿಂದಾಗಿ ಭಾರತದಲ್ಲಿ ಕೊರೊನಾ ವೈರಸ್‍ನಂತಹ ಸಾಂಕ್ರಾಮಿಕ ರೋಗಗಳು ಗಂಡಾಂತರ ಮಟ್ಟದಲ್ಲಿ ಹೆಚ್ಚಾಗಲು ಕಾರಣ ಎಂದು ಹೇಳಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಮಾಜದ ದುರ್ಬಲ ವರ್ಗದವರು, ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರು ತಮ್ಮ ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತಿಲ್ಲ. ತತ್ಪರಿಣಾಮವಾಗಿ ಅವರು ಅಪಾಯಕಾರಿ ಸೋಂಕು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin