ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ, ತಪ್ಪಿದ ಭಾರಿ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ.ಮೇ.7 ಜೀವಾಮೃತ ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಅದೃಷ್ಟ ವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲ. ಬೆಳಗಾವಿ ತಾಲೂಕಿನ ಮುತ್ನಾಳ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲಗಲಿ ಅಪಘಾತ ನಡೆದಿದೆ.ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ತುಂಬಿ ಕೊಂಡು ತೆರಳುತ್ತಿದ್ದಾಗ ಒವರ್ ಟೆಕ್ ಮಾಡುವ ಭರದಲ್ಲಿ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಟ್ಯಾಂಕರ್ ನ ಮುಂದಿನ ಟೈಯರ್ ಬ್ಲಾಸ್ಟ್ ಆಗಿದ್ದು ಆ್ಯಕ್ಸಲ್ ಕೂಡ ಕಟ್ಟಾಗಿದೆ.ಒಂದು ವೆಳೆ ಆ್ಯಕ್ಸಿಜನ್ ಸೊರಿಕೆ ಯಾಗಿದ್ದರೆ ಭಾರಿ ಅನಾಹುತವೆ ಸಂಭವಿಸುತ್ತಿತ್ತು ಅದೃಷ್ಟ ವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲ.

ಸುಮಾರು.16 ಕೆ ಎ ಎಲ್ ಸಾಮರ್ಥ್ಯ ದ ಆಕ್ಸಿಜನ್ ಸಾಗಿಸಲಾಗುತ್ತಿತ್ತು.ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂದ ಪಟ್ಟ ಅಧಿಕಾರಿಗಳು.ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶಿಲನೆ ನಡೆಸಿ ಮತ್ತೊಂದು ಟ್ಯಾಂಕರ್ ನಲ್ಲಿ ಆಕ್ಸಿಜನ್ ಸ್ಥಳಾಂತರಿಸುವ ಸಿದ್ದತೆ ಕೈಗೊಂಡಿದ್ದಾರೆ.

Facebook Comments