ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.22-ಭಾರತದ ಕೊರೊನಾ ಲಸಿಕಾ ಅಭಿಯಾನವು ಆತಂಕದಿಂದ ಆಶ್ವಾಸನೆಯತ್ತ ಪ್ರಯಾಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 100 ಕೋಟಿ ಮಂದಿಗೆ ಯಶಸ್ವಿಯಾಗಿ ಲಸಿಕೆ ಹಾಕಲು ಯಶಸ್ವಿಯಾದ ಹಿನ್ನೆಲೆಯಲ್ಲಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಲಸಿಕೆ ಬಗ್ಗೆ ಅಪನಂಬಿಕೆ ಮತ್ತು ಭಯವನ್ನು ಸೃಷ್ಟಿಸಲು ವಿವಿಧ ಪ್ರಯತ್ನಗಳು ನಡೆದರೂ ಲಸಿಕೆ ಬಗ್ಗೆ ಜನರ ನಂಬಿಕೆಗೆ ಯಶಸ್ಸು ಸಿಕ್ಕಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಒಂಬತ್ತು ತಿಂಗಳಲ್ಲಿ ಯಾವುದೇ ವಿಐಪಿ ಸಂಸ್ಕøತಿಗೆ ಆಸ್ಪದ ನೀಡದೆ 100 ಕೋಟಿ ಜನರಿಗೆ ಲಸಿಕೆ ಹಾಕಿರುವುದು ಸಾಧಾರಣ ಸಂಗತಿಯಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮ ಕೊರೊನಾ ಲಸಿಕೆ ಅಭಿಯಾನ ವಿಜ್ಞಾನದ ಹುಟ್ಟು, ವಿಜ್ಞಾನದ ಚಾಲಕ ಹಾಗೂ ವಿಜ್ಞಾನ ಆಧಾರಿತ ಕಾರ್ಯಕ್ರಮವಾಗಿದೆ ಎಂದು ಪ್ರಧಾನಿಗಳು ವರ್ಣಿಸಿದ್ದಾರೆ. ಆಸಕ್ತ ಗುಂಪುಗಳು ಆದ್ಯತೆ ಮೇರೆಗೆ ಕೊರೊನಾ ಲಸಿಕೆ ಹಾಕುವಂತೆ ಭಾರಿ ಒತ್ತಡ ಹಾಕಿದ್ದವು. ಆದರೆ, ನಾವು ಇದ್ಯಾವುದನ್ನು ಪರಿಗಣಿಸದೆ ನೂರು ಕೋಟಿ ಮಂದಿಗೆ ಲಸಿಕೆ ಹಾಕಲು ಯಶಸ್ವಿಯಾಗಿರುವುದಕ್ಕೆ ಹಾಗೂ ಲಸಿಕೆ ತಯಾರಿಸಿ ದೇಶವನ್ನು ಆತ್ಮನಿರ್ಭರ್ ಮಾಡಲು ಸಹಕರಿಸಿದ ಭಾರತೀಯ ವಿಜ್ಞಾನಿಗಳು ಹಾಗೂ ವೈದ್ಯ ವೃಂದಕ್ಕೆ ಮೋದಿ ಇದೇ ಸಂದರ್ಭದಲ್ಲಿ ಗೌರವ ಸಲ್ಲಿಸಿದರು.

ಪ್ರತಿಯೊಬ್ಬರು ಮಾಲೀಕತ್ವದ ಪಡೆದರೆ ಯಾವುದು ಅಸಾಧ್ಯವಲ್ಲ ಎನ್ನುವುದಕ್ಕೆ ಲಸಿಕಾ ಅಭಿಯಾನವೇ ಸಾಕ್ಷಿ. ಆರೋಗ್ಯಕಾರ್ಯಕರ್ತರು ಮತ್ತಿತರರು ಕಷ್ಟಕರವಾದ ಬೆಟ್ಟಗುಡ್ಡಗಳನ್ನು ಹತ್ತಿ ಜನರಿಗೆ ಲಸಿಕೆ ಹಾಕಿದ್ದಾರೆ ಅವರ ಕಾರ್ಯ ಚಿರಸ್ಮರಣೀಯ ಎಂದರು.

ನಮ್ಮಲ್ಲಿ ಕೆಲವರು ವಿದೇಶಿ ಬ್ರಾಂಡ್‍ಗಳನ್ನು ಮಾತ್ರ ನಂಬುತ್ತಾರೆ ಆದರೆ, ಕೊರೊನಾ ಲಸಿಕೆ ವಿಚಾರದಲ್ಲಿ ದೇಶವಾಸಿಗಳು ಒಮ್ಮತದಿಂದ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ನಂಬಿದ್ದರು. ಇದು ಮಹತ್ವದ ಮಾದರಿ ಬದಾಲವಣೆ ಎಂದು ಅವರು ಅಭಿಪ್ರಾಯಪಟ್ಟರು.
ಇದುವರೆಗೂ ಬೆರಳೆಣಿಕೆಯ ದೇಶಗಳು ಮಾತ್ರ ತಮ್ಮದೆ ಲಸಿಕೆಗಳನ್ನು ಅಭಿವೃದ್ಧಿಪಡಿಸಿವೆ. 180ಕ್ಕಿಂತ ಹೆಚ್ಚು ದೇಶಗಳಲ್ಲಿ ಅತ್ಯಂತ ಸೀಮಿತ ಗುಂಪುಗಳನ್ನು ಮಾತ್ರ ಅವಲಂಭಿಸಿರುವುದು ಕಣ್ಣಿಗೆ ಕಾಣುವ ಸತ್ಯ ಎಂದು ಮೋದಿ ಹೇಳಿದರು.

ಒಂದು ವೇಳೆ ಭಾರತ ಕೂಡ ತನ್ನದೆ ಆದ ಲಸಿಕೆ ಹೊಂದಿಲ್ಲದಿದ್ದರೆ ಪರಿಸ್ಥಿತಿಯನ್ನು ನೀವೆ ಊಹಿಸಿಕೊಳ್ಳಿ ಎಂದ ಅವರು ನಮ್ಮ ಈ ಸಾಧನೆಯಿಂದ ನಾವು ವಿಶ್ವಕ್ಕೆ ಮಾದರಿಯಾಗಿದ್ದೇವೆ ಎಂದು ಹೇಳಿದರು. ಲಸಿಕೆ ಅಭಿಯಾನ ಆರಂಭವಾದಾಗ 130 ಕೋಟಿ ಜನರಿಗೆ ಲಸಿಕೆ ನೀಡಲು ಸಾಧ್ಯವೆ ಎಂದು ಕೆಲವರು ಅನುಮಾನಿಸಿದ್ದರು. ಎಲ್ಲರಿಗೂ ಲಸಿಕೆ ನೀಡಲು ಕನಿಷ್ಠ 4 ವರ್ಷ ಬೇಕಾಗಬಹುದು ಎಂದು ಹೇಳಿದ್ದರು.

ಇನ್ನುಕೆಲವರು ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲ್ಲ ಎಂದು ತೆಗಳಿದ್ದರು. ವ್ಯಾಕ್ಸಿನ್ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ ತಾಂಡವವಾಡಲಿದೆ ಎಂದು ಹೀಗಳೆದಿದ್ದರು. ಅಂತಹವರಿಗೆ ನಮ್ಮ ತಾಕತ್ತು ಏನೆಂಬುದನ್ನು ದೇಶದ ಜನರೆ ಸಾಬೀತುಪಡಿಸಿದ್ದಾರೆ ಎಂದು ಅವರು ನುಡಿದರು.

ನಾವು ನೂರು ಕೋಟಿ ಮಂದಿಗೆ ಲಸಿಕೆ ಹಾಕಿಸಿದ ಪ್ರತಿಫಲ ಎಲ್ಲ 130 ಕೋಟಿ ಭಾರತೀಯರಿಗೆ ಸಲ್ಲುತ್ತದೆ ಎಂದು ಮೋದಿ ಹೇಳಿದರು.
ಕೊರೊನಾ ಮಹಾಮಾರಿಗೆ ಬಡವ-ಶ್ರೀಮಂತ ಎಂಬ ಭೇದಭಾವ ಇಲ್ಲ. ನಾವು ಅದೇ ರೀತಿ ಯಾವುದೇ ಬೇಧ ಭಾವವಿಲ್ಲದೆ ಲಸಿಕೆ ಹಾಕಿರುವುದು ಹೆಮ್ಮೆಯ ವಿಚಾರ ಎಂದರು.

ಇದೀಗ ಇಡಿ ವಿಶ್ವವೇ ಭಾರತ ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿದೆ ಎಂದು ನಂಬಿದ್ದರೆ. ಅವರ ಈ ನಂಬಿಕೆಯೇ ದೇಶದಲ್ಲಿ ಫಾರ್ಮಾ ಹಬ್ ಬೆಳೆಯಲು ನಾಂದಿಯಾಗಲಿದೆ ಎಂದು ಅವರು ಉಲ್ಲೇಖಿಸಿದರು.

ನಾವು ಕೊರೊನಾ ಹಿಮ್ಮೆಟ್ಟಿಸಿದ್ದೇವೆ ಎಂಬ ಉದಾಸೀನ ಬೇಡ. ಮಹಾಮಾರಿ ವಿರುದ್ಧ ನಿರಂತರವಾಗಿ ಹೋರಾಟ ನಡೆಸಬೇಕಿದೆ. ಹೀಗಾಗಿ ಯಾರು ಮೈ ಮರೆಯಬಾರದು ಎಂದು ಅವರು ಮನವಿ ಮಾಡಿಕೊಂಡರು. ಮುಂಬರುವ ಹಬ್ಬ ಹರಿದಿನಗಳಲ್ಲಿ ಜನ ಎಚ್ಚರ ವಹಿಸಬೇಕು. ಹಾಗೂ ಸಂಭ್ರಮಗಳ ಸಂದರ್ಭದಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನೇ ಖರೀದಿಸುವಂತೆ ಅವರು ಮನವಿ ಮಾಡಿದರು.

Facebook Comments

Sri Raghav

Admin