ಜೈಲಿನಿಂದ ಬಂದ ಪಾದರಾಯನಪುರ ಪುಂಡರಿಗೆ ಭವ್ಯ ಸ್ವಾಗತ ನೀಡಿದ ಶಾಸಕ ಜಮೀರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.3- ಪಾದಾರಾಯನಪುರ ದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ  ಬಂಧಿತರಾಗಿದ್ದ 126 ಆರೋಪಿಗಳು ಇಂದು ಬಿಡುಗಡೆಯಾಗಿ ಬಂದಾಗ ಪೊಷಕರ ದಂಡೇ ಅಲ್ಲಿ ನೆರೆದಿತ್ತು.

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾ ಗಿದ್ದರೂ ಬಹಳಷ್ಟು ಮಂದಿ ಅವರನ್ನು ಬರಮಾಡಿಕೊಳ್ಳಲು ಗುಂಪು ಸೇರಿದ್ದು ಕಂಡುಬಂತು. ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಸಹ ಸ್ಥಳದಲ್ಲಿದ್ದು, ಅವರನ್ನು ಸ್ವಾಗತ ಕೋರಿದರು.

ಪಾದರಾಯನಪುರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದ ವೇಳೆ ತಪಾಸಣೆಗೆ ಬಂದಿದ್ದ ಆರೋಗ್ಯ ಕಾರ್ಯಕರ್ತರ ಮೇಲೆ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿ ಕೆಲವರು ಪುಂಡಾಟ ಮೆರೆದಿದ್ದರು. ಈ ಪೈಕಿ 126 ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಇಂದು ಷರತ್ತುಬದ್ಧ ಜಾಮೀನಿನ ಮೇಲೆ ಇವರೆಲ್ಲರೂ ಬಿಡುಗಡೆಯಾಗಿ ಬಂದಿದ್ದು, ಬುದ್ದಿಮಾತು ಹೇಳಿ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಎಚ್ಚರಿಕೆ ವಹಿಸಲು ತಿಳಿ ಹೇಳಬೇಕಾದವರೇ ಇವರಿಗೆ ಗ್ರ್ಯಾಂಡ್ ವೆಲ್‍ಕಮ್ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಶಾಸಕ ಜಮೀರ್ ಅಹಮರ್ ಅವರು ದಾಂದಲೆ ನಡೆಸಿ ಜೈಲಿನಿಂದ ಬಂದವರಿಗೆ ಸ್ವಾಗತ ಕೋರುವುದಲ್ಲದೆ ೧೦ ಸಾವಿರ ನಗದು ಹಾಗು ಆಹಾರದ ಕಿಟ್ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಮುಂದುವರಿದು ಕೆಲವರು ಇವರು ಜೈಲಿನಲ್ಲಿದ್ದಾಗ ಅವರ ಕುಟುಂಬಗಳಿಗೆ ಆರ್ಥಿಕ ನೆರವನ್ನು ಕೂಡ ನೀಡಿದ್ದರೆಂಬ ಮಾತುಗಳು ಕೇಳಿ ಬಂದಿವೆ.

 

Facebook Comments