ಜೂ.28ರಂದು ‘ವಿಲನ್’ ಟೀಸರ್ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Villan--01ಕೊನೆಗೂ ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕ್ಷಣ ಸಮೀಪಿಸುತ್ತಿದೆ. ಕಿಚ್ಚ ಮತ್ತು ಶಿವಣ್ಣ ಅಭಿನಯದ  ಬಿಗ್ ಬಜೆಟ್ , ಮಲ್ಟಿ ಸ್ಟಾರ್ , ಬಹು ನಿರೀಕ್ಷಿತ ವಿಲನ್ ಚಿತ್ರದ ಟ್ರೈಲರ್ ಜೂನ್ 28 ರಂದು  ಬಿಡುಗಡೆಯಾಗಲಿದೆ.  ಟೀಸರ್ ಬಿಡುಗಡೆಯನ್ನು ವಿಭಿನ್ನ ಮತ್ತು ವಿಶೇಷವಾಗಿಸಲು ನಿರ್ದೇಶಕ  ಜೋಗಿ ಪ್ರೇಮ್ ನಿರ್ಧರಿಸಿದ್ದಾರೆ .

“ದಿ ವಿಲನ್” ಟೀಸರ್ ಇದೇ 28 ರಂದು ಮಾಗಡಿ ರೋಡ್ನಲ್ಲಿರುವ ಜಿ.ಟಿ. ವಾರ್ಡ್ ಮಾಲ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಮಾಲ್ ನ ಎಲ್ಲಾ ಪರದೆಯ ಮೇಲೆ ಈ ಟೀಸರ್ ಬಿಡುಗಡೆಯಾಗುತ್ತಿರುವುದು ವಿಶೇಷ. ಈ ಒಂದು ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಆಗಮಿಸಿ ಟೀಸರ್ ಲೋಕಾರ್ಪಣೆ ಮಾಡಲಿದ್ದಾರoತೆ.ಈ ಒಂದು ಟೀಸರ್ ನೋಡಲು ಬರುವ ಅಭಿಮಾನಿಗಳಿಗೆ 500 ರೊ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.ಇದಕ್ಕೆ ಒಂದು ಕಾರಣವೂ ಕೂಡ ಇದೇ. ಸಿ.ಆರ್.ಮನೋಹರ್ ನಿರ್ಮಾಣದ ಈ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದಾರೆ . ಈ ಚಿತ್ರ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸಾಮಾನ್ಯವಾಗಿ ಒಂದು ಚಿತ್ರಕ್ಕೆ ನಿರ್ದೇಶಕನೇ ನಾಯಕ. ಅಂತ ಹಲವಾರು ನಾಯಕರ ಸ್ಥಿತಿ ಇಂದು ತುಂಬಾ ಕಷ್ಟದಲ್ಲಿದ್ದಾರೆ. ಹಾಗಾಗಿಯೇ ಈ ಒಂದು ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರುವ ಸಿನಿಪ್ರಿಯರು 500 ರೊ ಕೊಟ್ಟು ಟಿಕೆಟ್ ಅನ್ನು ಪಡೆದರೆ ಆ ಹಣವನ್ನೆಲ್ಲ ಸೇರಿಸಿ ತೊಂದರೆಯಲ್ಲಿರುವ ನಿರ್ದೇಶಕ ಎ.ಟಿ .ರಘು ಹಾಗೂ ಎ.ಆರ್. ಬಾಬು ಸೇರಿದಂತೆ ಇನ್ನೂ ಕೆಲವು ನಿರ್ದೇಶಕರಿಗೆ ಸಹಾಯ ಮಾಡುವ ಉದ್ದೇಶವೂ ಈ ಚಿತ್ರ ತಂಡಕ್ಕೆ ಇದೆಯಂತೆ. “ದಿ ವಿಲನ್” ಚಿತ್ರಕ್ಕೆ ಅರ್ಜುನ್ ಜನ್ಯ ರ ಸಂಗೀತ ಸಂಗೀತದ ಮೋಡಿ ಇರುವ ಈ ಚಿತ್ರದ ಟೀಸರ್ ಇದೇ 28 ರಂದು ಸಂಜೆ 7 ಗಂಟೆಗೆ ಜಿ.ಟಿ.ವಾರ್ಡ್ ಮಾಲ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಟಿಕೆಟ್ ಗಾಗಿ ಈ ನಂಬರುಗಳನ್ನು ಸಂಪರ್ಕಿಸಬಹುದು : 9880718005 / 9741026131 .

Facebook Comments

Sri Raghav

Admin