ರಾಹುಲ್ ದೇವ್ ಪಾಕ್ ವಾಯುಪಡೆಯ ಪ್ರಫ್ರಥಮ ಹಿಂದೂ ಪೈಟರ್ ಪೈಲೆಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್, ಮೇ 5-ಪಾಕಿಸ್ತಾನ ವಾಯುಪಡೆ (ಪಿಎಎಫ್) ಗೆ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಹುಲ್ ದೇವ್ ಪ್ರಪ್ರಥಮ ಹಿಂದು ಫೈಟರ್ ಪೈಲೆಟ್ ಆಗಿ ನೇಮಕಗೊಂಡಿದ್ದಾರೆ.

ರಾಹುಲ್ ದೇವ್ ಅವರನ್ನು ಪಿಎಎಫ್‍ನ ಜನರಲ್ ಡ್ಯೂಟಿ ಫೈಲೆಟ್ ಆಫೀಸರ್ ಮತ್ತು ಫೈಟರ್ ಪೈಲೆಟ್ ಆಗಿ ನೇಮಕ ಮಾಡಲಾಗಿದೆ. ಪಾಕಿಸ್ತಾನ ಮಾಧ್ಯಮ ವರದಿ ಪ್ರಕಾರ ರಾಹುಲ್ ಸಿಂಧ್ ಪ್ರಾಂತ್ಯದಲ್ಲಿರುವ ಅತಿ ತೊಡ್ಡ ಜಿಲ್ಲೆಯ ಥಾಪರ್‍ಕರ್ ಪ್ರದೇಶದವರು.

ಈ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ದೊಡ್ಡ ಜನಸಂಖ್ಯೆಯ ವಾಸವಾಗಿದೆ. ಇಲ್ಲಿನ ಹಿಂದೂಗಳನ್ನು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುತ್ತದೆ.  ರಾಹುಲ್ ದೇವ್ ಅವರನ್ನು ಪಾಕಿಸ್ತಾನ ವಾಯು ಪಡೆಯ ಪೈಲೆಟ್ ಆಗಿ ನೇಮಕ ಮಾಡಿರುವುದಕ್ಕೆ ಅಲ್ ಪಾಕಿಸ್ತಾನ್ ಹಿಂದು ಪಂಚಾಯತ್ ಕಾರ್ಯದರ್ಶಿ ರವಿ ದವನಿ ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಅನೇಕ ಮಂದಿ ಪಾಕಿಸ್ತಾನದ ನಾಗರಿಕ ಸೇವೆ ಮತ್ತು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ವಾಯು ಪಡೆಯ ಹಿಂದೂ ಪೈಲೆಟ್ ಆಗಿ ಇಂದು ನೇಮಕಗೊಂಡಿರುವುದು ದೇಶದ ಇತಿಹಾಸದಲ್ಲೇ ಇದೆ ಮೊದಲು ಎಂದು ತಿಳಿಸಿದ್ದಾರೆ.

Facebook Comments

Sri Raghav

Admin