ಗಡಿಯಲ್ಲಿ ಪಾಕ್ ಸೇನೆಯಿಂದ ಗುಂಡಿನದಾಳಿ : ದೇಗುಲ, ಮನೆಗಳಿಗೆ ಹಾನಿ, ಜಾನುವಾರುಗಳಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ನ.1- ಇಂಡೋ-ಪಾಕ್‍ಗಡಿಯಲ್ಲಿ ಪಾಕಿಸ್ತಾನ ಸೇನಾಪಡೆಗಳ ಕದನ ವಿರಾಮ ಒಪ್ಪಂದ ಉಲ್ಲಂಘನೆ ಮತ್ತು ಅಪ್ರಚೋದಿತ ಗುಂಡಿನ ದಾಳಿ ಮುಂದುವರಿದಿದ್ದರು, ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದಾರೆ.  ಕಾಶ್ಮೀರ ಕಣಿವೆಯ ಅಂತಾರಾಷ್ಟ್ರೀಯಗಡಿ(ಐಬಿ) ಮತ್ತು ಗಡಿ ನಿಯಂತ್ರಣ ರೇಖೆ (ಎಲ್‍ಒಸಿ)ಗಳಲ್ಲಿ ಪಾಕ್ ಸೈನಿಕರು ಅಪ್ರೇರಿತ ಗುಂಡಿನ ದಾಳಿ ಮತ್ತು ಮೋರ್ಟಾರ್‍ಗಳನ್ನು ಸಿಡಿಸಿದ ಪರಿಣಾಮ ದೇಗುಲ, ಮನೆಗಳಿಗೆ ಹಾನಿಯಾಗಿದ್ದು, ಜಾನುವಾರಿಗಳಿಗೆ ಗಾಯಗಳಾಗಿವೆ.

ಕತುವಾ ಮತ್ತು ಪೂಂಚ್ ಜಿಲ್ಲೆಗಳ ವಿವಿಧ ವಲಯಗಳಲ್ಲಿ ಪಾಕ್ ಸೇನೆಯ ಪುಂಡಾಟಕ್ಕೆ ಭಾರತೀಯಯೋದರು ದಿಟ್ಟ ಪ್ರತ್ಯುತ್ತರ ನೀಡಿದ್ದು, ಕೆಲಕಾಲ ಗುಂಡಿನ ಚಕಮಕಿ ನಡೆದಿದೆ. ಸಾವು-ನೋವಿನ ವರದಿಯಾಗಿಲ್ಲ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕತುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಹೀರಾನಗರ್ ವಲಯದ ಮನ್ವರಿ, ಚಾಂದ್ವಾ ಮತ್ತು ಲೋಂಡಿ ಗ್ರಾಮಗಳ ಮೇಲೆ ಪಾಕಿಸ್ತಾನಿ ರೇಂಜರ್‍ಗಳು ಗುಂಡಿನ ದಾಳಿ ಮತ್ತು ಶೆಲ್‍ಗಳನ್ನು ಹಾರಿಸಿದ ಪರಿಣಾಮ ಶಿವ ದೇಗುಲ ಮತ್ತು ಮನೆಗಳಿಗೆ ಹಾನಿಯಾಗಿವೆ.  ಅನೇಕ ಜಾನುವಾರುಗಳಿಗೆ ಗುಂಡೇಟು ಬಿದ್ದಿದ್ದು, ಪಶು ವೈದ್ಯರಿಂದಚಕಿತ್ಸೆ ನೀಡಲಾಗಿದೆ.

ಪೂಂಚ್ ಜಿಲ್ಲೆಯಗಡಿ ನಿಯಂತ್ರಣ ರೇಖೆ ಬಳಿ ಶಹಪುರ, ಕಿರ್ನಿ, ಕಸಬಾ ಸೆಕ್ಟರ್‍ಗಳಲ್ಲೂ ಪಾಕಿಸ್ತಾನ ಸೇನೆ ನಡೆಸಿದ ಪುಂಡಾಟಕ್ಕೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

Facebook Comments