ಮತ್ತೊಂದು ಪಾಕ್ ಡ್ರೋಣ್ ಹೊಡೆದುರುಳಿಸಿದ ಬಿಎಸ್‍ಎಫ್

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು , ಜ.28- ಗಡಿ ಪ್ರದೇಶದಲ್ಲಿ ಪದೇ ಪದೇ ತಗಾದೆ ತೆಗೆಯುತ್ತಿರುವ ಪಾಕಿಸ್ತಾನ ಇತ್ತೀಚೆಗೆ ಡ್ರೋಣ್‍ಗಳನ್ನು ಭಾರತದ ಗಡಿಯೊಳಗೆ ನುಸುಳಿಸುವ ಪ್ರಯತ್ನಗಳನ್ನು ಮುಂದುವರೆಸಿದ್ದು , ಅದನ್ನು ಭಾರತೀಯ ಯೋಧರು ವಿಫಲಗೊಳಿಸುತ್ತಲೇ ಇದ್ದಾರೆ. ಗಡಿ ಭದ್ರತಾ ಸಿಬ್ಬಂದಿಗಳು ನಿನ್ನೆ ರಾತ್ರಿ ಪಾಕಿಸ್ತಾನದ ಬೇಹುಗಾರಿಕೆ ಡ್ರೋಣ್ ಅನ್ನು ಹೊಡೆದುರುಳಿಸಿದೆ.

ಈ ವರ್ಷ ಭಾರತೀಯ ಯೋಧರು ಹೊಡೆದುರುಳಿಸಿದ ಮೂರನೆ ಮಾನವ ರಹಿತ ಹಾರುವ ಯಂತ್ರ ಇದಾಗಿದೆ. ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಈ ಘಟನೆ ವರದಿಯಾಗಿದೆ. ಅರ್ನಿಯಾ ಪ್ರದೇಶದ ಫಾರ್ವರ್ಡ್ ಪೋಸ್ಟ್‍ನಲ್ಲಿ ಡ್ರೋಣ್ ಕಂಡು ಬಂದಿದ್ದನ್ನು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಮೆರಾ ರಹಿತವಾದ ಡ್ರೋಣ್ ಮಾದರಿಯ ವಸ್ತು ಹಾರಾಟ ನಡೆಸುತ್ತಿತ್ತು ಅದನ್ನು ಹೊಡೆದುರುಳಿಸಲಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಬಿಎಸ್‍ಎಫ್‍ನ ಐಜಿ ಜಮ್ಮು ಫ್ರಂಟಿಯರ್ ಎನ್.ಎಸ್.ಜಮ್ವಾಲ್ ಹೇಳಿದ್ದಾರೆ. ಕಳೆದ ವಾರ ಪಂಜಾಬ್‍ನ ಇಂದೋರ್-ಪಾಕ್ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋಣ್ ಅನ್ನು ಬಿಎಸ್‍ಎಫ್ ಯೋಧರು ಹೊಡೆದುರುಳಿಸಿದ್ದರು.

Facebook Comments