ಅಕ್ರಮವಾಗಿ ಭಾರತದೊಳಗೆ ನುಸುಳಿದ್ದ ಪಾಕ್ ನುಸುಳುಕೋರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Arrested-Man
ಫಿರೋಜ್‍ಪುರ್, ಮೇ 28-ಪಂಜಾಬ್‍ನ ಫಿರೋಜ್‍ಪುರ್ ಸೆಕ್ಟರ್ ಅಂತಾರಾಷ್ಟ್ರೀಯ ಗಡಿ(ಐಬಿ) ಮೂಲಕ ಭಾರತದೊಳಗೆ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಬಿಎಸ್‍ಎಫ್ ಸಿಬ್ಬಂದಿ ಇಂದು ಬಂಧಿಸಿದ್ದಾರೆ. ಪಾಕ್ ನುಸುಳುಕೋರನನ್ನು ಮಹಮದ್ ಆಸಿಫ್(32) ಎಂದು ಗುರುತಿಸಲಾಗಿದೆ. ಅತನಿಂದ ಪಾಕಿಸ್ತಾನದ 1,200 ರೂ.ಗಳ ಕರೆನ್ಸಿ ಮತ್ತು ಕೆಲವು ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Facebook Comments

Sri Raghav

Admin