ಕಾಶ್ಮೀರದಲ್ಲಿ ಜನ ಸಂಚಾರ ನಿರ್ಬಂಧ ತೆರವು, ದೂರವಾಣಿ ಸೇವೆ ಪುನಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ಆ.17- ಭಾರತೀಯ ಸಂವಿಧಾನದ 370ನೇ ವಿಧಿ ರದ್ಧತಿ ನಂತರ ದಿಗ್ಬಂಧನದಂತಹ ಪರಿಸ್ಥಿತಿಗೆ ಒಳಗಾಗಿದ್ದ ಕಣಿವೆ ಪ್ರಾಂತ್ಯ ಜಮ್ಮು ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದೆ.

ರಾಜಧಾನಿ ಶ್ರೀನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ಜನಸಂಚಾರ ಇಂದು ಬೆಳಗ್ಗೆಯಿಂದ ಆರಂಭವಾಗಿದೆ. ಸರ್ಕಾರಿ ನೌಕರರು ಎಂದಿನಂತೆ ಇಂದು ಕರ್ತವ್ಯಕ್ಕೆ ಹಾಜರಾದರು.ಇದೇ ವೇಳೆ 20ಕ್ಕೂ ಹೆಚ್ಚು ಕಡೆಗಳಲ್ಲಿ ಸ್ಥಿರ ದೂರವಾಣಿ ಕರೆ ಸೇವೆ ಪುನಾರಂಭಗೊಂಡಿದೆ.

ರಾಜಬಾಗ್, ನೆಹರೂನಗರ ಸೇರಿದಂತೆ ಕೆಲವೆಡೆ ಲ್ಯಾಂಡ್ ಲೈನ್ ಫೋನ್ ಸಂಪರ್ಕ ಮರು ಸ್ಥಾಪನೆಯಾದರೆ, ಸೂಕ್ಷ್ಮ ಸ್ಥಳಗಳಾದ ಲಾಲ್‍ಚೌಕ್, ಪ್ರೆಸ್ ಎನ್‍ಕ್ಲೆವ್ ಮತ್ತಿತರರ ಕಡೆ ಸಂಪರ್ಕ ಸೇವೆ ಇನ್ನು ಆರಂಭವಾಗಿಲ್ಲ. ಸೋಮವಾರದ ನಂತರ ಶಾಲಾ-ಕಾಲೇಜುಗಳು ಮರು ಆರಂಭವಾಗುವ ಸಾಧ್ಯತೆಗಳಿದೆ.

ಪರಿಸ್ಥಿತಿಯನ್ನು ಅವಲೋಕಿಸಿ ಹಂತ-ಹಂತವಾಗಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಾರೀ ಬಂದೋಬಸ್ತ್ ಮುಂದುವರೆದಿದ್ದು, ರಸ್ತೆಗಳು ಮತ್ತುಆಯಾಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೆಡ್‍ಗಳನ್ನು ಹಾಕಲಾಗಿದ್ದು, ಯೋಧರನ್ನು ಪಹರೆ ನಿಯೋಜಿಸಲಾಗಿದೆ.

Facebook Comments

Sri Raghav

Admin