ಪಾಕ್‌ನ ವಿದೇಶಾಂಗ ಸಚಿವ ಖರೇಷಿಗೂ ಕೊರೊನಾ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್,ಜು.4- ಪಾಕಿಸ್ತಾನ ವಿದೇಶಾಂಗ ಸಚಿವ ಮಹಿಮದ್ ಖರೇಷಿಗೆ ಕೊರೊನಾ ಸೊಂಕು ತಗುಲಿದೆ. ನಿನ್ನೆ ಮಧ್ಯಾಹ್ನ ಅಮೆರಿಕದ ವಿಶೇಷ ಅಧಿಕಾರಿ ಜೊತೆ ಅಫ್ಘಾನಿಸ್ತಾನದ ಶಾಂತಿ ವಿಷಯ ಕುರಿತು ಸಭೆ ವೇಳೆ ತೀವ್ರ ಜ್ವರ ಕಾಣಿಸಿಕೊಂಡಿದೆ.

ನಂತರ ಅವರನ್ನು ವೈದ್ಯರು ತಪಾಸಣೆ ನಡೆಸಿ ತಕ್ಷಣ ಕೋವಿಡ್ ಪರೀಕ್ಷೆಗೆ ಒಳಗಾಗಲು ಸೂಚಿಸಿದ್ದಾರೆ. ಗಂಟಲು ದ್ರವದ ಪರೀಕ್ಷೆಯಲ್ಲಿ ಸೊಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ಬುಧವಾರದಿಂದ ಪ್ರಧಾನಿ ಇಮ್ರಾನ್ ಖಾನ್ ಜೊತೆ ಸಭೆ ಹಾಗೂ ಸಂಪುಟ ಸಭೆಯಲ್ಲಿ ಸಚಿವರು ಪಾಲ್ಗೊಂಡಿದ್ದರು.

Facebook Comments