ಗಡಿಯಲ್ಲಿ ಪಾಕ್ ಶೆಲ್ ದಾಳಿ : ಗ್ರಾಮಸ್ಥರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಡಿ.10- ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಗಡಿ ಭಾಗದ ಕೆಲ ಗ್ರಾಮಸ್ಥರು ಗಾಯಗೊಂಡಿದ್ದು , ಮನೆಗಳಿಗೆ ಹಾನಿಯಾಗಿದೆ.  ಪಾಕಿಸ್ತಾನದ ಸೈನಿಕರ ಉದ್ಧಟತನಕ್ಕೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದು , ಕೆಲ ಕಾಲ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂಂಚ್ ವಲಯದ ಶಹಾಪುರ್ ಕಿರ್ನಿ ಮತ್ತು ಬಾಲಾಕೋಟ್ ಗಡಿ ಭಾಗಗಳಲ್ಲಿ ಪಾಕ್ ರೇಂಜರ್‍ಗಳು ವ್ಯಾಪಕ ಶೆಲ್ ದಾಳಿ ನಡೆಸಿದರೂ ಇದರಿಂದ ಗ್ರಾಮಸ್ಥರಿಗೆ ಕೆಲ ಗಾಯಗಳಾಗಿದ್ದು , ಜನರು ಭಯಭೀತರಾಗಿದ್ದಾರೆ. ಪಾಕಿಸ್ತಾನದ ದುಂಡಾವರ್ತನೆಗೆ ನಮ್ಮ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಸೋಮವಾರ ಪಾಕಿಸ್ತಾನಿ ಸೇನೆ ಮೂರು ಬಾರಿ ಕದನ ವಿರಾಮ ಉಲ್ಲಂಘಿಸಿ ಅಪ್ರೇರಿತ ಗುಂಡಿನ ದಾಳಿ ನಡೆಸಿದೆ.

Facebook Comments