ಗಡಿಯಲ್ಲಿ ಮತ್ತೆ ಪಾಕ್ ಪುಂಡಾಟ, ಷೆಲ್ ದಾಳಿಗೆ ಭಾರತ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಜು.12- ಕಾಶ್ಮೀರ ಕಣಿವೆಯ ಗಡಿಭಾಗದಲ್ಲಿ ಮತ್ತೆ ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಜ್ ಮತ್ತು ರಜೌರಿ ಜಿಲ್ಲೆಗಳ ಮೂರು ವಲಯಗಳ ಸೇನಾ ಮುಂಚೂಣಿ ನೆಲೆಗಳು ಮತ್ತು ಜನವಸತಿ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನಿ ರೇಂಚರ್‍ಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು.

ನಂತರ ಮಾರ್ಟರ್‍ಗಳಿಂದ ಷೆಲ್ ದಾಳಿ ಆರಂಭಿಸಿ ಇದಕ್ಕೆ ತಿರುಗೇಟು ಯೋಧರು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಇಂದು ಬೆಳಿಗ್ಗೆ ಕೆಲಕಾಲ ಗುಂಡಿನ ಚಕಮಕಿ ನಡೆಯಿತು ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಪೂಂಜ್ ಜಿಲ್ಲೆಯ ಮನ್‍ಕೋಟ್ ಮತ್ತು ಕೃಷ್ಣ ಘಾಟಿ ಹಾಗೂ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‍ಗಳಲ್ಲಿ ಪಾಕಿಸ್ತಾನ ಯೋಧರು ಕದಾನವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ್ದರು. ಇದಕ್ಕೆ ನಮ್ಮ ಯೋಧರು ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಪಿಆರ್‍ಒ ಹೇಳಿದ್ದಾರೆ.

ಈ ಘಟನೆಯಲ್ಲಿ ಸಾವು-ನೋವು, ಆಸ್ತಿ-ಪಾಸ್ತಿಗಳ ನಷ್ಟದ ವದಂತಿಗಳ ವರದಿಗಳಲಿಲ್ಲ. ಕಳೆದ ಶುಕ್ರವಾರ ಸಹ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಪಾಕಿಸ್ತಾನದ ಪುಡಾಂಟಕ್ಕೆ ಭಾರತೀಯ ಯೋಧರು ಸಮರ್ಥ ಉತ್ತರ ನೀಡಿದ್ದರು.

Facebook Comments