ಅಮೆರಿಕಾದಲ್ಲಿ ಒಗ್ಗೂಡುತ್ತಿದ್ದಾರೆ ಪಾಕ್ ಬೆಂಬಲಿತ ಖಲಿಸ್ತಾನಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಸೆ.15-ಅಮೆರಿಕಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಭಾರತ ಮನವಿ ಮಾಡಿಕೊಂಡಿದ್ದರೂ ಅಮೆರಿಕಾದಲ್ಲಿ ಪಾಕ್ ಬೆಂಬಲಿತ ಖಲಿಸ್ತಾನಿ ಉಗ್ರರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಮೆರಿಕದ ಚಿಂತಕರ ಚಾವಡಿ ಎಚ್ಚರಿಸಿದೆ.

ಪಾಕಿಸ್ತಾನದ ಅಸ್ಥಿರತೆ ಕುರಿತಂತೆ ಬಿಡುಗಡೆ ಮಾಡಲಾಗಿರುವ ವರದಿಯಲ್ಲಿ ಅಮೆರಿಕಾದಲ್ಲಿ ಪಾಕ್ ಬೆಂಬಲಿತ ಖಲಿಸ್ತಾನಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎಂದು ನಮೂದಿಸಲಾಗಿದೆ. ಅಮೆರಿಕಾದಲ್ಲಿ ಬೀಡುಬಿಟ್ಟಿರುವ ಖಲಿಸ್ತಾನಿಗಳು ಹಾಗೂ ಕಾಶ್ಮೀರ ಪ್ರತ್ಯೆಕತಾವಾದಿಗಳಿಗೆ ಪಾಕ್ ಬೆಂಬಲ ನೀಡುತ್ತಿರುವ ವಿಚಾರದ ಬಗ್ಗೆ ಹಡ್ಸನ್ ಇನ್ಸ್‍ಟಿಟ್ಯೂಟ್ ಗಮನ ಹರಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿನ ಉಗ್ರಗಾಮಿ ಮತ್ತು ಭಯೋತ್ಪಾದಕ ಸಂಘಟನೆಗಳು ಅಮೆರಿಕಾದಲ್ಲಿ ನೆಲೆ ನಿಲ್ಲುತ್ತಿರುವುದು ದಕ್ಷಿಣ ಏಷ್ಯಾದಲ್ಲಿ ಅಮೆರಿಕ ವಿದೇಶಾಂಗ ನೀತಿಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಲಾಗಿದೆ.

Facebook Comments