ಪಾಕ್ ಸೇನೆಯ ಶೆಲ್ ದಾಳಿಗೆ ಮಹಿಳೆ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಜು.8- ಜಮ್ಮು-ಕಾಶ್ಮೀರದ ಪೂಂಛ್ ವಲಯದ ಗಡಿಯಲ್ಲಿ ಪಾಕ್ ಸೇನಾಪಡೆ ಅಪ್ರಚೋದಿತ ಗುಂಡಿನ ಚಕಮಕಿ ನಡೆಸಿ ಜನವಸತಿ ಪ್ರದೇಶದ ಮೇಲೆ ಶೆಲ್ ದಾಳಿ ಮಾಡಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿರೇಖೆಯ ಪೂಂಛ್‍ನ ಬಾಲಕೋಟ್ ಮತ್ತು ಮೆಂಧಾಲ್ ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿದೆ ಎಂದು ಸೇನಾಪಡೆ ಖಚಿತಪಡಿಸಿದೆ.

ಇಂದು ಮುಂಜಾನೆ 2 ಗಂಟೆ ಸಂದರ್ಭದಲ್ಲಿ ಲಾನ್‍ಜೋಟಿ ಗ್ರಾಮದ ಮೇಲೆ ಪಾಕ್ ಪಡೆ ಉಡಾಯಿಸಿದ ಶೆಲ್ ಸ್ಫೋಟಗೊಂಡು ರೇಷಮ್‍ಬೀ (63), ಹಕಮ್‍ಬೀ ಎಂಬ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.

ತಕ್ಷಣ ಅವರನ್ನು ಜಮ್ಮು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಳಗ್ಗೆ ರೇಷಮ್‍ಬೀ ಕೊನೆಯುಸಿರೆಳೆದಿದ್ದಾರೆ. ಪಾಕ್‍ನ ಈ ಪುಂಡಾಟಕ್ಕೆ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

Facebook Comments