ಡಿ.ಜೆ.ಹಳ್ಳಿ-ಕೆ.ಜೆ.ಹಳ್ಳಿ ಗಲಭೆ ಕುರಿತು ಬೆಚ್ಚಿಬೀಳಿಸುವ ಸಂಗತಿ ಬಹಿರಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ದೇಶದ ಗಮನ ಸೆಳೆದಿರುವ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದ ಕೋಮುಗಲಭೆ ಸಂಬಂಧ ಪೊಲೀಸರ ಬಂಧನಕ್ಕೊಳಪಟ್ಟಿರುವ ಮೂವರು ಆರೋಪಿಗಳಿಗೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಸದ್ಯ ಬೆಂಗಳೂರಿನ ಸಿಸಿಬಿ ಪೊಲೀಸರ ವಶದಲ್ಲಿರುವ 300 ಕ್ಕೂ ಹೆಚ್ಚಿನ ಆರೋಪಿಗಳ ಪೈಕಿ ಮೂವರಿಗೆ ಪಾಕ್ ಜೊತೆ ನಂಟು ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ( ಎನ್‍ಐಎ)ದ ಅಧಿಕಾರಿಗಳು ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡಿದೆ.

ಕೋಮುಗಲಭೆಯ ಪ್ರಮುಖ ಆರೋಪಿಗಳೆಂದು ಹೇಳಲಾಗುತ್ತಿರುವ ಎಸ್‍ಡಿಪಿಐ ಕಾರ್ಯಕರ್ತ ಸಮೀವುದ್ದೀನ್, ಡಿಚ್ಚಿ ಮುಬಾರಕ್ ಹಾಗೂ ಜೈದ್ ಎಂಬ ಮೂವರು ಶಂಕಿತರು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಂಘಟನೆ ಹಾಗೂ ಭಾರತಕ್ಕೆ ಬೇಕಾಗಿರುವ ಕೆಲವು ಉಗ್ರರ ಜೊತೆ ನಿರಂತವಾಗಿ ಸಂಪರ್ಕ ಇಟ್ಟುಕೊಂಡಿರುವುದು ವಿಚಾರಣೆಯ ವೇಳೆ ಬಹಿರಂಗಗೊಂಡಿದೆ.

ಎನ್ ಐ ಎ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಇದೀಗ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ. ಭಾರತದಲ್ಲಿ ನಿಷೇದಕ್ಕೊಳಪಟ್ಟಿರುವ ಆಲ್- ಹಿಂದ್ ಉಗ್ರಗಾಮಿ ಸಂಘಟನೆಯ ಸಕ್ರೀಯ ಸದಸ್ಯನಾಗಿದ್ದ ಸಮೀವುದ್ದೀನ್ ದಕ್ಷಿಣ ಭಾರತದಲ್ಲಿ ಸಂಘಟನೆಯ ಹೊಣೆಹೊತ್ತುಕೊಂಡಿದ್ದ. ತನ್ನ ಮೇಲೆ ಯಾರ ಅನುಮಾನಪಾಡಬಾರದೆಂಬ ಕಾರಣಕ್ಕಾಗಿಯೇ ಎಸ್ ಡಿಪಿಐ ಸಂಘಟನೆಯ ಸದಸ್ಯನಾಗಿದ್ದ.

ಸಮೀವುದ್ದೀನ್ ತಾತಾ ಮೂಲತಃ ಪಾಕಿಸ್ತಾನದವರಾಗಿದ್ದು, 30 ವರ್ಷಗಳ ಹಿಂದೆ ಕೊಡಗಿಗೆ ಬಂದು ಸಣ್ಣಪುಟ್ಟ ವ್ಯವಹಾರ ನಡೆಸಿಕೊಂಡು ಜೀವನ ನಡೆಸುತ್ತಿದ್ದರು.ಇನ್ನು ಸಮೀವುದ್ದೀನ್ ನ ತಂದೆ ಮಡಿಕೇರಿಯ ವಿರಾಜ್‍ಪೇಟೆಯಲ್ಲಿ ಮಾಂಸದ ಅಂಗಡಿ ಇಟ್ಟುಕೊಂಡಿದ್ದರು.

ಎಸ್‍ಡಿಪಿಐ ಸಕ್ರೀಯ ಸದಸ್ಯನಾಗಿದ್ದ ಸಮೀವುದ್ದೀನ್ ಬೆಂಗಳೂರಿನ ಹೆಚ್.ಎಸ್,ಬಿ ಆರ್ ಲೇಔಟ್ ನಲ್ಲಿ ನಾರಿ ಎಂಬ ಎನ್ ಜಿಒ ನಡೆಸುತ್ತಿದ್ದರೂ ಇದನ್ನು ಆತನ ಪತ್ನಿಯೇ ನೋಡಿಕೊಳ್ಳುತ್ತಿದ್ದರು.ಸಾಮಾಜ ಸೇವೆ ಮುಖವಾಡ ಹಾಕಿದ್ದ ಇತ ಹಣಕಾಸಿನ ನೆರವು ಪಡೆಯಲು ಪದೇ ಪದೇ ದುಬೈಗೆ ಹೋಗುತ್ತಿದ್ದ.

ಭಾರತದಿಂದ ನೇರವಾಗಿ ಪಾಕ್ ಗೆ ತೆರಳಲು ವಿಮಾನದ ಸಂಪರ್ಕ ಇಲ್ಲದ ಕಾರಣ, ದುಬೈನಿಂದ ಮೂಲಕ ಕರಾಚಿ ಹಾಗೂ ಲಾಹೋರ್‍ಗೂ ತೆರಳಿರುವುದನ್ನು ಎನ್ ಐ ಎ ಪತ್ತೆ ಮಾಡಿದೆ. ಪಾಕಿಸ್ತಾನಕ್ಕೆ ಹೋಗುತ್ತಿದ್ದ ಸಮೀವುದ್ದೀನ್ ಭಾರತದ ಕೆಲವು ಪ್ರಮುಖ ನಗರಗಳಲ್ಲಿ ವಿದ್ವಾಂಸಕ ಕೃತ್ಯ ನಡೆಸಲು ಕೆಲವು ಉಗ್ರರಿಂದ ತರಬೇತಿಯನ್ನು ಪಡೆದಿದ್ದ ಎಂದು ತಿಳಿದು ಬಂದಿದೆ.

ಅಲ್ಲಿಂದ ಪ್ರೇರಿತನಾಗಿಯೇ ಬೆಂಗಳೂರಿನ ಡಿಜೆ ಹಳ್ಳಿ, ಹಾಗೂ ಕೆಜೆ ಹಳ್ಳಿಯಲ್ಲಿ ಗಲಭೆ ಸೃಷ್ಟಿಸಲು ಕೆಲವು ಪುಂಡರಿಗೆ ಹಣಕಾಸಿನ ನೆರವು ನೀಡಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ.

# ಪ್ರಮುಖ ಆರೋಪಿ ಜೊತೆ ಸಂಪರ್ಕ :
ಇನ್ನು ಇದೇ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಮ್ತತೊರ್ವ ಪ್ರಮುಖ ಆರೋಪಿ ಜೈದ್ ಗೂ ಪಾಕ್ ಉಗ್ರಗಾಮಿ ಸಂಘಟನೆ ಹಾಗೂ ಉಗ್ರರ ಜೊತೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿರುವುದು ದೃಡಪಟ್ಟಿದೆ.

ಎಸ್ ಡಿಪಿಐ ಕಾರ್ಯಕರ್ತನಾಗಿ ಅಟೋ ಚಾಲಕನಾಗಿದ್ದ ಜೈದ್ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಬಾಂಬ್ ಸ್ಟೋಟದ ಪ್ರಮುಖ ರೂವಾರಿ ಹಾಗೂ ಸದ್ಯ ಎನ್ ಐ ಎ ವಶದಲ್ಲಿರುವ ಶಂಕಿತ ಉಗ್ರ ಅಫ್ರೀದಿ ಜೊತೆ ಈತ ಸ್ನೇಹ ಬೆಸಿದುಕೊಂಡಿದ್ದ.

ಕುತೂಹಲಕಾರಿ ಅಂಶವೆಂದರೆ ಜೈದ್ ಇದೇ ಆಫ್ರೀದಿ ಸಹೋದರಿಯನ್ನು ವಿವಾಹವಾಗಿದ್ದ. ಹೀಗಾಗಿ ಪಾಕ್ ಮೂಲದ ಉಗ್ರರ ಜೊತೆ ಸಂಪರ್ಕ ಹೊಂದಲು ಇದು ಸಾಕಷ್ಟು ಸಹಾಯವಾಗಿತ್ತು ಎಂಬುದನ್ನು ಎನ್ ಐ ಎ ಪತ್ತೆ ಮಾಡಿದೆ.

# ಡಿಸಿಪಿ ಕಾರಿಗೆ ಡಿಚ್ಚಿ :
ಪ್ರಕರಣದಲ್ಲಿ ಮತ್ತೊರ್ವ ಆರೋಪಿಯಾಗಿರುವ ಡಿಚ್ಚಿ ಮುಬಾರಕ್ ಗಲಭೆಯ ವೇಳೆ ಡಿಸಿಪಿ ಶರಣಪ್ಪ ಅವರ ಕಾರನ್ನು ತಲೆಯಿಂದ ಗುದ್ದಿ ಪುಡಿ ಪುಡಿ ಮಾಡಿದ್ದ ಈತನಿಗೂ ಉಗ್ರರ ನಂಟಿರುವುದು ದೃಡಪಟ್ಟಿದೆ.

ಕಳೆದ ಮಂಗಳವಾರ ರಾತ್ರಿ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಗಲಭೆ ನಡೆಯುತ್ತಿದ್ದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಹೋಗಿದ್ದ ಶರಣಪ್ಪ ಅವರ ಕಾರನ್ನು ಧ್ವಂಸಗೊಳಿಸಿ ಬೆಂಕಿಹಚ್ಚಿದ್ದು ಇದೇ ಮುಬಾರಕ್.

ಇದೀಗ ಈತನಿಗೂ ಉಗ್ರರ ಜೊತೆ ಸಂಪರ್ಕ ಇತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ.ಎಸ್‍ಡಿಪಿಐ ಪದಾಧಿಕಾರಿಯಾಗಿದ್ದ ಈತನಿಗೆ ಸ್ಥಳೀಯ ಮುಖಂಡರ ಕುಮ್ಮಕ್ಕು ನೀಡಿದ್ದರಿಂದಲೇ ಗಲಭೆ ಸೃಷ್ಟಿಸಿದ್ದ. ಗಲಭೆ ನಡೆದರೆ, ನ್ಯಾಯಾಲಯದಿಂದ ಜಾಮೀನು ಕೊಡಿಸುವುದಾಗಿಯೂ ಕೆಲವು ರಾಜಕೀಯ ಪಕ್ಷಗಳ ಮುಖಂಡರು ಭರವಸೆ ಕೊಟ್ಟಿದ್ದರಿಂದಲೇ ಸಾರ್ವಜನಕರ ಆಸ್ತೀ-ಪಾಸ್ತೀಗೆ ಬೆಂಕಿ ಹಚ್ಚಿದ್ದರು.

# ಎನ್ ಐ ಎ ತೆಕ್ಕೆಗೆ ಶಂಕಿತರು :
ಇದೀಗ ಬೆಂಗಳೂರಿನ ಸಿಸಿಬಿ ವಶದಲ್ಲಿರುವ ಮೂವರು ಶಂಕಿತರಿಗೆ ಪಾಕ್ ಉಗ್ರರ ಜೊತೆ ಸಂಪರ್ಕ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಇವರನ್ನು ರಾಷ್ಟ್ರೀಯ ತನಿಖಾ ದಳ( ಎನ್ ಐಎ)ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ಬೇರೆ ಭಾಗಗಳಲ್ಲೂ ಬಾಂಬ್ ಸ್ಟೋಟ ಸೇರಿದಂತೆ ವಿದ್ವಾಂಸಕ ಕೃತ್ಯ ನಡೆಸಲು ಸಂಚು ನಡೆಸಿದ್ದರೆ ಎಂಬುದರ ಕುರಿತು ಎನ್‍ಐಎ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಸಮೀವುದ್ದೀನ್, ಡಿಚ್ಚಿ ಮುಬಾರಕ್ ಹಾಗೂ ಜೈದ್ ಅವರುಗಳನ್ನು ಯಾವುದೇ ಕ್ಷಣದಲ್ಲಿ ಎನ್‍ಐಎ ತನಿಖಾ ತಂಡ ವಶಕ್ಕೆ ಪಡೆಯುವುದು ನಿಶ್ಚಿತವಾಗಿದೆ.

Facebook Comments

Sri Raghav

Admin