ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆಗೆ ಭಾರತೀಯ ಯೋಧರ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು,ಸೆ.5- ಕಣಿವೆ ಪ್ರಾಂತ್ಯ ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನ ಸೇನಾ ಪಡೆಗಳಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.

ಪೂಂಚ್ ಜಿಲ್ಲೆಯ ಗಡಿನಿಯಂತ್ರಣ ರೇಖೆಯ ಮುಂಚೂಣಿ ವಲಯಗಳಾದ ಶಹಬಾಗ್, ಕಿರ್ನಿ ಮತ್ತು ದೇಗ್ವಾರ್ ಪ್ರದೇಶಗಳಲ್ಲಿನ ಸೇನಾ ನೆಲೆಗಳು ಮತ್ತು ಗಡಿಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಇಂದು ಬೆಳಗ್ಗೆ 9.15 ನಿಮಿಷಕ್ಕೆ ಪಾಕಿಸ್ತಾನಿ ರೇಂಜರ್‍ಗಳು ಗುಂಡು ಮತ್ತು ಶೆಲ್ ದಾಳಿಗಳನ್ನು ನಡೆಸಿದರು.

ಭಾರತದ ಗಡಿ ಪಹರೆಗೆ ನಿಯೋಜಿತರಾಗಿದ್ದ ಬಿಎಸ್‍ಎಫ್ ಯೋಧರು ಪಾಕಿಸ್ತಾನಕ್ಕೆ ಪ್ರಬಲ ಮತ್ತು ದಿಟ್ಟ ಪ್ರತ್ಯುತ್ತರ ನೀಡಿದರು.

ಈ ಸಂದರ್ಭದಲ್ಲಿ ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು. ಸಾವುನೋವಿನ ವರದಿಯಾಗಿಲ್ಲ.  ಕಳೆದ ಮೂರು ತಿಂಗಳಿನಿಂದ ಪಾಕಿಸ್ತಾನಿ ಸೇನೆ ಯುದ್ದ ವಿರಾಮವನ್ನು ಉಲ್ಲಂಘಿಸಿ ನಿರಂತರವಾಗಿ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಿದ್ದರು ಭಾರತೀಯ ಯೋಧರು ತಿರುಗೇಟು ನೀಡುತ್ತಿದ್ದಾರೆ.

Facebook Comments