ಜವಾಹರಲಾಲ್ ನೆಹರು ಅವರ ದಂತವೈದ್ಯರ ಮಗ ಅರಿಫ್ ಈಗ ಪಾಕ್ ನೂತನ ಅಧ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Pak-Precident-Arif-alvi
ಇಸ್ಲಮಾಬಾದ್, ಸೆ.5 (ಪಿಟಿಐ)-ಪಾಕಿಸ್ತಾನ ನೂತನ ಅಧ್ಯಕ್ಷ ಡಾ. ಅರಿಫ್ ಅಲ್ವಿ ಅವರು ಭಾರತದೊಂದಿಗೆ ಹೊಂದಿದ್ದ ಸಂಬಂಧದ ಕೆಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.  ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿದ್ದ ಪಂಡಿತ್ ಜವಹರ್‍ಲಾಲ್ ನೆಹರು ಅವರಿಗೆ ತಮ್ಮ ತಂದೆ ಅಧಿಕೃತ ದಂತ ವೈದ್ಯರಾಗಿದ್ದರು ಎಂದು ಹೊಸ ಅಧ್ಯಕ್ಷರು ತಿಳಿಸಿದ್ದಾರೆ.

ವೃತ್ತಿಯಲ್ಲಿ ದಂತ ವೈದ್ಯರಾಗಿದ್ದ 69 ವರ್ಷಗಳ ಡಾ.ಅರಿಫ್ ಅಲ್ವಿ ಪ್ರಧಾನಮಂತ್ರಿ ನವಾಜ್ ಷರೀಫ್‍ಗೆ ಪರಮಾಪ್ತರು. ನಿನ್ನೆ ನಡೆದ ಚುನಾವಣೆಯಲ್ಲಿ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಭ್ಯರ್ಥಿ ಐತಾಜ್ ಅಹಸಾನ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ ಹುರಿಯಾಳು ಮೌಲಾನಾ ಫಜ್ ಉರ್ ರೆಹಮಾನ್ ಅವರನ್ನು ಮಣಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

Facebook Comments

Sri Raghav

Admin