ಭಾರತೀಯ ವಿಮಾನಗಳ ಹಾರಾಟಕ್ಕೆ ವಾಯು ಸರಹದ್ದು ಮುಕ್ತಗೊಳಿಸಿದ ಪಾಕ್…!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್/ನವದೆಹಲಿ, ಜು.16- ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನವು ಇಂದು ಬೆಳಗ್ಗೆಯಿಂದ ತನ್ನ ವಾಯು ಗಡಿಯನ್ನು ಎಲ್ಲ ನಾಗರಿಕ ವಿಮಾನಗಳ ಹಾರಾಟಕ್ಕೆ ಸಂಪೂರ್ಣ ಮುಕ್ತಗೊಳಿಸಿದೆ. ಪಾಕಿಸ್ತಾನದ ಈ ಕ್ರಮದಿಂದ ಭಾರತಕ್ಕೂ ಪ್ರಯೋಜನವಾಗಲಿದೆ.

ಫುಲ್ವಾಮಾದಲ್ಲಿ ಉಗ್ರಗಾಮಿಗಳ ದಾಳಿಗೆ 20ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ನಂತರ ಭಾರತೀಯ ವಾಯುಪಡೆಗಳು ಪಾಕಿಸ್ತಾನದ ಬಾಲಕೋಟ್ ಮೇಲೆ ವಾಯು ದಾಳಿ ನಡೆಸಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ್ದವು.

ಇದಾದ ನಂತರ ಪಾಕಿಸ್ತಾನವು ತಮ್ಮ ವಾಯು ಸರಹದ್ದಿನಲ್ಲಿ ಬಹುತೇಕ ಭಾಗವನ್ನು ಭಾರತೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಿತ್ತು. ಬಾಲಾಕೋಟ್ ದಾಳಿ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಾಯುಗಡಿ ಭಾರತ ಸೇರಿದಂತೆ ಎಲ್ಲ ನಾಗರಿಕ ವಿಮಾನಗಳ ಮುಕ್ತ ಹಾರಾಟಕ್ಕೆ ತೆರವುಗೊಳಿಸಿದೆ.

ಪಾಕಿಸ್ತಾನದ ಈ ಪೂರಕ ನಿರ್ಧಾರವು ಏರ್ ಇಂಡಿಯಾಗೆ ದೊಡ್ಡ ರಿಲೀಫ್ ಲಭಿಸಿದಂತಾಗಿದೆ. ಬಾಕಿಸ್ತಾನದ ವಾಯು ಸರಹದ್ದು ತಾತ್ಕಾಲಿಕವಾಗಿ ಬಂದ್ ಆಗಿದ್ದರಿಂದ ತನ್ನ ವಿವಿಧ ಅಂತಾರಾಷ್ಟ್ರೀಯ ವಿಮಾನಗಳು ಅನ್ಯ ಮಾರ್ಗದ ಮೂಲಕ ದೀರ್ಘಯಾನ ಮಾಡಿದ ಕಾರಣ ಏರ್ ಇಂಡಿಯಾ ಸಂಸ್ಥೆಗೆ 491 ಕೋಟಿ ರೂ.ಗಳ ನಷ್ಟ ಉಂಟಾಗಿತ್ತು.

ಇಂದು 12.41ರ ನಸುಕಿನ ಅವಧಿಯಿಂದ ಪಾಕಿಸ್ತಾನವು ತಮ್ಮ ವಾಯು ಗಡಿಯನ್ನು ಎಲ್ಲ ವಿಮಾನಗಳ ಹಾರಾಟಕ್ಕೆ ಮುಕ್ತಗೊಳಿಸಿದೆ. ನಾನು ಪಾಕಿಸ್ತಾನ ವಾಯು ಮಾರ್ಗವಾಗಿ ನಮ್ಮ ಸೇವೆಯನ್ನು ಶೀಘ್ರ ಆರಂಭಿಸುತ್ತೇವೆ ಎಂದು ಭಾರತದ ವಿಮಾನಯಾನ ಸಂಸ್ಥೆಗಳ ಮುಖ್ಯಸ್ಥರು ಸಂತಸದಿಂದ ಹೇಳಿದ್ದಾರೆ.

ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರವು ತನ್ನ ಏರ್‍ಮೆನ್ (ನೊಟಮ್)ಗೆ ಇಂದು 12.41ರ ನಸುಕಿನಲ್ಲಿ ಈ ಸಂಬಂಧ ನೋಟಿಸ್ ಜಾರಿಗೊಳಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ವಿಮಾನಗಳೂ ಸೇರಿದಂತೆ ಎಲ್ಲ ಸಂಸ್ಥೆಗಳಿಗೂ ಹಾರಾಟಕ್ಕೆ ಮುಕ್ತ ಅವಕಾಶ ನೀಡುವಂತೆ ಹಾಗೂ ವಾಯು ಸಂಚಾರ ಸೇವೆಗಳನ್ನು ಪುನರಾರಂಭಿಸುವಂತೆ ಸೂಚನೆ ನೀಡಿದೆ.

Facebook Comments

Sri Raghav

Admin