ಇಂಡೋ-ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಬಿಎಸ್‍ಎಫ್

ಈ ಸುದ್ದಿಯನ್ನು ಶೇರ್ ಮಾಡಿ

ಫಿರೋಜ್‍ಪುರ್(ಪಂಜಾಬ್), ಸೆ.12- ಇಂಡೋ-ಪಾಕಿಸ್ತಾನ ಗಡಿಯಲ್ಲಿ ಭಾರೀ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನವೊಂದನ್ನು ವಿಫಲಗೊಳಿಸಿರುವ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರು ಮುಂದೆ ನಡೆಯಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯಗಳನ್ನು ತಪ್ಪಿಸಿದ್ದಾರೆ.

ಪಂಜಾಬ್‍ನ ಫಿರೋಜ್‍ಪುರ್ ಜಿಲ್ಲೆಯ ಅಬೋಹರ್‍ನ ಭಾರತ-ಪಾಕ್ ಗಡಿ ಭಾಗದಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಯತ್ನ ವಿಫಲವಾಗಿದೆ.

ಈ ಸಂಬಂಧ 3 ಎಕೆ-47 ರೈಫಲ್‍ಗಳು, 6 ಮ್ಯಾಗಝೈನ್‍ಗಳು ಮತ್ತು 91 ಸುತ್ತು ಬುಲೆಟ್‍ಗಳು, ಎರಡು ಎಂಐ ರೈಫಲ್‍ಗಳು, 4 ಮ್ಯಾಗಝೈನ್‍ಗಳು ಮತ್ತು 57 ಸುತ್ತು ಗುಂಡುಗಳು, ಎರಡು ಪಿಸ್ತೂಲ್‍ಗಳು, 4 ಮ್ಯಾಗಝೈನ್‍ಗಳು ಮತ್ತು 20 ಸುತ್ತು ಬುಲೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇವು ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳಾಗಿದ್ದು, ಪಾಕಿಸ್ತಾನದ ಮೂಲಕ ಭಾರತದಲ್ಲಿರುವ ಉಗ್ರಗಾಮಿಗಳಿಗೆ ಪೂರೈಸಲು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂಬ ಸಂಗತ ಬಯಲಾಗಿದೆ.

ಕೆಲವು ತಿಂಗಳ ಹಿಂದೆ ಫಿರೋಜ್‍ಪುರ್‍ನ ಗಡಿ ಪ್ರದೇಶದಲ್ಲಿ ಚೀನಾ ಡ್ರೋನ್ ಮೂಲಕ ಪಾಕಿಸ್ತಾನವು ಭಾರತದೊಳಗೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಪೂರೈಸಲು ನಡೆಸಿದ ಯತ್ನವೊಂದನ್ನು ಬಿಎಸ್‍ಎಫ್ ಯೋಧರು ವಿಫಲಗೊಳಿಸಿದ್ದರು.

Facebook Comments